ಕನ್ವರ್ ಯಾತ್ರೆ | ಹೋಟೆಲ್‌ಗಳ ಪರವಾನಗಿ ಪ್ರದರ್ಶನ ಕಡ್ಡಾಯ: ಉತ್ತರಾಖಂಡ ಸರ್ಕಾರ

- Advertisement -

ಡೆಹ್ರಾಡೂನ್‌: ವಾರ್ಷಿಕ ಕನ್ವರ್ ಯಾತ್ರಿಕರು ಸಾಗುವ ಮಾರ್ಗದುದ್ದಕ್ಕೂ ತೆರೆಯಲಾಗಿರುವ ಮಳಿಗೆಗಳು ಆಹಾರ ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರ ಪ್ರದರ್ಶಿಸುವುದನ್ನು ಉತ್ತರಾಖಂಡ ಸರ್ಕಾರ ಕಡ್ಡಾಯಗೊಳಿಸಿದೆ.

- Advertisement -

ತೀರ್ಥಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಢಾಬಾಗಳು, ಫಾಸ್ಟ್‌ಫುಟ್‌ಗಳು, ತಳ್ಳುಗಾಡಿಗಳ ಮಾಲೀಕರು ಪರವಾನಗಿ ಅಥವಾ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಗ್ರಾಹಕರು ಸುಲಭವಾಗಿ ನೋಡಲು ಸಾಧ್ಯವಾಗುವಂತೆ ಪ್ರದರ್ಶಿಸಬೇಕು ಎಂದು ಆರೋಗ್ಯ ಕಾರ್ಯದರ್ಶಿ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಆಯುಕ್ತ ಆರ್‌. ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ಸಣ್ಣ ವ್ಯಾಪಾರಿಗಳಿಗೂ ಇದು ಅನ್ವಯ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ಆದೇಶ ಪಾಲಿಸದವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆ–2006ರ ಸೆಕ್ಷನ್‌ 55ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ₹ 2 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

- Advertisement -


Must Read

Related Articles