Home ಟಾಪ್ ಸುದ್ದಿಗಳು ಹಿರಿಯ ದೈವ ನರ್ತಕರಿಗೆ ಸರ್ಕಾರದಿಂದ ಮಾಸಾಶನ

ಹಿರಿಯ ದೈವ ನರ್ತಕರಿಗೆ ಸರ್ಕಾರದಿಂದ ಮಾಸಾಶನ

ಬೆಂಗಳೂರು: ‘ಕಾಂತಾರ’ ಚಿತ್ರದಿಂದ ಭೂತಾರಾಧನೆಯು ಇಡೀ ಜಗತ್ತಿನ ಗಮನಸೆಳೆದ ಬೆನ್ನಲ್ಲೇ ರಾಜ್ಯ ಸರ್ಕಾರ ಭೂತಾರಾಧನೆ ಮಾಡುವ ದೈವನರ್ತಕರಿಗೆ ಮಾಸಾಶನ ಘೋಷಿಸಿದೆ. 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳ ಮಾಸಾಶನ ನೀಡುವ ತೀರ್ಮಾನ ಪ್ರಕಟಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಪ್ರತಿ ವರ್ಷ ದೈವಾರಾಧನೆ ಮಾಡಿಕೊಳ್ಳುತ್ತಲೇ ತಮ್ಮ ಕಸುಬು ನಡೆಸುತ್ತಿರುವ ಜನ ಇದ್ದಾರೆ. ಹಾಗಾಗಿ ದೈವ ನರ್ತನ ಮಾಡುತ್ತಿರುವ 60 ವರ್ಷ ಮೀರಿದವರಿಗೆ ಮಾಸಾಶನ ನೀಡುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಸಂಬಂಧಪಟ್ಟ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲಾಗುತ್ತದೆ ಎಂದು ತಿಳಿಸಿದರು.

Join Whatsapp
Exit mobile version