Home ಟಾಪ್ ಸುದ್ದಿಗಳು ಕೆಜಿಎಫ್ ದಾಖಲೆ ಮುರಿದ ಕಾಂತಾರ ಸಿನೆಮಾ

ಕೆಜಿಎಫ್ ದಾಖಲೆ ಮುರಿದ ಕಾಂತಾರ ಸಿನೆಮಾ

ಬೆಂಗಳೂರು: ಚಲನಚಿತ್ರ ರಂಗದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ‘ಕಾಂತಾರ’ ಸಿನೆಮಾವು ಕೆಜಿಎಫ್ ಚಿತ್ರ ಸೃಷ್ಟಿಸಿದ ದಾಖಲೆಯೊಂದನ್ನು ಬ್ರೇಕ್ ಮಾಡಿದೆ.

ಕಾಂತಾರ ಸಿನೆಮಾ 25 ದಿನಗಳಲ್ಲಿ ರಾಜ್ಯದಲ್ಲಿ 77 ಲಕ್ಷ ಟಿಕೆಟ್‌ ಮಾರಾಟವಾಗಿದೆ. ಇಲ್ಲಿವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಸಿನೆಮಾ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನರು ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ ಕಾಂತಾರ ಸಿನೆಮಾವು ಪಾತ್ರವಾಗಿದೆ. ಈ ಬಗ್ಗೆ ಸ್ವತ ಟ್ವೀಟ್ ಮಾಡಿರುವ ಹೊಂಬಾಳೆ ಫಿಲಮ್ಸ್, ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ, ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ಕಾಂತಾರ. ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ ಎಂದು ಹೇಳಿಕೊಂಡಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರವನ್ನು ಈವರೆಗೆ ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿದ್ದರು. 2022 ರಲ್ಲಿ ಬಿಡುಗಡೆಯಾದ ‘ಕೆಜಿಎಫ್–2’ಚಿತ್ರವನ್ನು 72 ಲಕ್ಷ ಸಿನಿಮಾಪ್ರಿಯರು ವೀಕ್ಷಿಸಿದ್ದರು. ಈ ಮೂಲಕ 25 ದಿನಗಳಲ್ಲಿ 77 ಲಕ್ಷ ಜನ ವೀಕ್ಷಿಸುವ ಮೂಲಕ ಕಾಂತಾರ ಸಿನೆಮಾ ರೆಕಾರ್ಡ್ ಬ್ರೇಕ್ ಮಾಡಿದೆ.

Join Whatsapp
Exit mobile version