Home ಟಾಪ್ ಸುದ್ದಿಗಳು ಕಣ್ಣೂರು: ಮದುವೆ ಮನೆಯಲ್ಲಿ ಬಾಂಬ್ ಸ್ಫೋಟ| ಪ್ರಮುಖ ಆರೋಪಿ ಅಕ್ಷಯ್ ಬಂಧನ

ಕಣ್ಣೂರು: ಮದುವೆ ಮನೆಯಲ್ಲಿ ಬಾಂಬ್ ಸ್ಫೋಟ| ಪ್ರಮುಖ ಆರೋಪಿ ಅಕ್ಷಯ್ ಬಂಧನ

ಕಣ್ಣೂರು: ಕೇರಳದ ಕಣ್ಣೂರಿನ ಮದುವೆ ಮನೆಯ ಬಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಣ್ಣೂರು ಜಿಲ್ಲೆಯ ಏಚೂರು ಮೂಲದ ಅಕ್ಷಯ್ ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಿಜಿಲ್, ಸನೀಶ್ ಮತ್ತು ಜಿಜಿಲ್ ಎಂಬ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಿಥುನ್‌ ಎಂಬ ಯುವಕ ತಲೆ ಮರೆಸಿಕೊಂಡಿದ್ದು, ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ವ್ಯಾನ್‌ನಲ್ಲಿ ಬಾಂಬ್ ನೊಂದಿಗೆ ಬಂದ ಗುಂಪು ಮದುವೆ ಮೆರವಣಿಗೆಯ ಮೇಲೆ ದಾಳಿ ನಡೆಸಿತ್ತು. ಘಟನೆಯಲ್ಲಿ ಅದೇ ಗುಂಪಿನಲ್ಲಿದ್ದ ಏಚೂರು ನಿವಾಸಿ ಜಿಷ್ಣು (26) ದಾರುಣವಾಗಿ ಸಾವನ್ನಪ್ಪಿದ್ದನು. ದಾಳಿ ನಡೆಸುವಾಗ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ ಅಕ್ಷಯ್ ಜತೆಗೆ ಬಂದಿದ್ದ ಜಿಷ್ಣುವಿನ ದೇಹದ ಮೇಲೆ ಬಾಂಬ್ ತಾಗಿ ಸ್ಫೋಟಗೊಂಡಿತ್ತು.

Join Whatsapp
Exit mobile version