Home ಟಾಪ್ ಸುದ್ದಿಗಳು ಕನ್ನಡ ಮಾಧ್ಯಮದ ವಿರುದ್ಧ ನೆಟ್ಟಿಗರ ಆಕ್ರೋಶ: #KannadaMediaAgainstMuslims ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್’ನಲ್ಲಿ ನಂಬರ್ ವನ್...

ಕನ್ನಡ ಮಾಧ್ಯಮದ ವಿರುದ್ಧ ನೆಟ್ಟಿಗರ ಆಕ್ರೋಶ: #KannadaMediaAgainstMuslims ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್’ನಲ್ಲಿ ನಂಬರ್ ವನ್ ಟ್ರೆಂಡಿಂಗ್

ಬೆಂಗಳೂರು: ಕನ್ನಡ ಟಿವಿ ಚಾನೆಲ್’ಗಳ ವಿರುದ್ಧ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಟ್ವಿಟ್ಟರ್’ನಲ್ಲಿ #KannadaMediaAgainstMuslims ಎಂಬ ಹ್ಯಾಶ್ ಟ್ಯಾಗ್ ಕರ್ನಾಟಕದಲ್ಲಿ ನಂಬರ್ ವನ್ ಟ್ರೆಂಡಿಂಗ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಚಾಲ್ತಿಯಲ್ಲಿರುವ ಅನೇಕ ಕನ್ನಡ ಟಿವಿ ಚಾನೆಲ್’ಗಳು ಮುಸ್ಲಿಮ್ ವಿರೋಧಿಸಿ ನಿಲುವನ್ನು ನಿರಂತರವಾಗಿ ಹರಡುತ್ತಿದೆ. ಡಿಬೇಟ್ ಮತ್ತು ಪ್ಯಾನೆಲ್ ಚರ್ಚೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಸುದ್ದಿಗಳನ್ನು ಬಿತ್ತರಿಸುತ್ತಿದವು.

ಅಲ್ಲದೆ, ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ಮಸೂದ್ ಎಂಬಾತನನ್ನು ಸಂಘಪರಿವಾರದ ಕಾರ್ಯಕರ್ತರು ಕೊಲೆ ನಡೆಸಿದಾಗ ಯಾವುದೇ ರೀತಿಯಲ್ಲೂ ವರದಿ ಮಾಡದ ಕನ್ನಡ ಮಾಧ್ಯಮಗಳು, ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಎಂಬಾತನ ಕೊಲೆಗೆ ಸಂಬಂಧಿಸಿದಂತೆ ಅಬ್ಬರಿಸಿದ ಕನ್ನಡ ಮಾಧ್ಯಮಗಳು ಮುಸ್ಲಿಮ್ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದವು. ಇದರಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟು ಫಾಝಿಲ್ ಎಂಬಾತನ ಕೊಲೆ ನಡೆದಿತ್ತು.

ಮಾಧ್ಯಮದ ಈ ರೀತಿಯ ಪಕ್ಷಪಾತ ಧೋರಣೆಗೆ ಕೆರಳಿದ ನೆಟ್ಟಿಗರು #KannadaMediaAgainstMuslims ಎಂಬ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ನಂಬರ್ ವನ್ ಟ್ರೆಂಡಿಂಗ್ ಆಗುತ್ತಿದೆ.

Join Whatsapp
Exit mobile version