Home ಟಾಪ್ ಸುದ್ದಿಗಳು ಕಂಕನಾಡಿ: ‘ಶಾಮ್ ಇನ್ ಸ್ಟಿಟ್ಯೂಟ್’ ಉದ್ಘಾಟನೆ

ಕಂಕನಾಡಿ: ‘ಶಾಮ್ ಇನ್ ಸ್ಟಿಟ್ಯೂಟ್’ ಉದ್ಘಾಟನೆ

ಮಂಗಳೂರು: ಶ್ಯಾಮಲಾ ಎಜುಕೇಶನ್ ಟ್ರಸ್ಟ್ ನ ‘ಶಾಮ್ ಇನ್ ಸ್ಟಿಟ್ಯೂಟ್’ ಕಂಕನಾಡಿಯ ಮಂಗಳೂರು ಗೇಟ್ ಕಾಂಪ್ಲೆಕ್ಸ್ ಸಮೀಪದ ಕಟ್ಟಡದಲ್ಲಿ ಶುಕ್ರವಾರ ಉದ್ಘಾಟನೆಗೊಂಡಿತು.


ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸಂಸ್ಥೆ ಉದ್ಘಾಟಿಸಿ ಮಾತನಾಡಿ, ಸ್ಥಾಪಕರಾದ ಸಂದೇಶ ಅವರ ದೂರದೃಷ್ಟಿಯೊಂದಿಗೆ ಈ ಸಂಸ್ಥೆ ಆರಂಭವಾಗಿದೆ. ಕರಾವಳಿ ಜನತೆಗೆ ಉತ್ತಮ ಅವಕಾಶಗಳು, ಉದ್ಯೋಗ ಆಧಾರಿತ ಕೊರ್ಸ್ ಗಳು ಲಭ್ಯವಾಗಲಿವೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಅಗತ್ಯವಿರುವ ಮೌಲ್ಯಗಳನ್ನು ಸಂಸ್ಥೆ ಕಲಿಸಲಿ ಎಂದು ಹೇಳಿದರು.


ಶಾಸಕ ಡಾ| ವೈ. ಭರತ್ ಶೆಟ್ಟಿ ಮಾತನಾಡಿ, ಸಂಸ್ಥೆ ಮಂಗಳೂರಿಗೆ ಹೊಸ ಅವಕಾಶ ಕಲ್ಪಿಸಿದೆ. ಹಾಸ್ಪಿಟಾಲಿಟಿಯೊಂದಿಗೆ ಮ್ಯಾನೇಜ್ ಮೆಂಟ್ ಹೇಗೆ ಮಾಡಬೇಕೆಂಬುವ ಹೊಸ ಅನುಭವವನ್ನು ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಒದಗಿಸಲಿದೆ. ಏವಿಯೇಷನ್ ಕುರಿತು ಹೆಚ್ಚಿನ ವಿಚಾರ ತಿಳಿಸಲು ವಿಮಾನ ಮಾದರಿ ರಚಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಯತ್ನವಾಗುತ್ತಿದೆ ಎಂದರು.

Join Whatsapp
Exit mobile version