Home ಟಾಪ್ ಸುದ್ದಿಗಳು ಎಲೋನ್ ಮಸ್ಕ್ ನಿರ್ಧಾರಕ್ಕೆ ನಟಿ ಕಂಗನಾ ಬೆಂಬಲ

ಎಲೋನ್ ಮಸ್ಕ್ ನಿರ್ಧಾರಕ್ಕೆ ನಟಿ ಕಂಗನಾ ಬೆಂಬಲ

ನವದೆಹಲಿ: ಬ್ಲ್ಯೂಟಿಕ್ ಪಡೆಯಲು 8 ಡಾಲರ್ ಶುಲ್ಕ ನೀಡಬೇಕು ಎಂಬ ಎಲೋನ್ ಮಸ್ಕ್ ನಿರ್ಧಾರಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ಬೆಂಬಲ ನೀಡಿದ್ದಾರೆ.

ವಿಶೇಷವೆಂದರೆ, ಕಂಗನಾ ರಣಾವತ್ ಪ್ರಚೋದನಕಾರಿ ಪೋಸ್ಟ್ ಮಾಡಿದ ಕಾರಣಕ್ಕೆ ಶಾಶ್ವತವಾಗಿ ಇದೇ ಟ್ವೀಟರ್ ನಿಂದ ಬ್ಯಾನ್ ಆಗಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ನಟಿ ಕಂಗನಾ, ಟ್ವಿಟರ್ ಬ್ಲ್ಯೂಟಿಕ್ ಗಾಗಿ ಹಣ ಪಾವತಿಸಬೇಕಾದ ನಿರ್ಧಾರಕ್ಕೆ ನನ್ನ ಬೆಂಬಲವಿದೆ. ಇದರಿಂದ ಅನಧಿಕೃತ ಖಾತೆಗಳು ರದ್ದಾಗಲಿವೆ. ಅನಧಿಕೃತ ಖಾತೆಗಳಿಂದ ವಿನಾಕಾರಣ ತೊಂದರೆ ಅನುಭವಿಸಬೇಕಾಗಿದೆ. ಎಲ್ಲ ಅಧಿಕೃತ ಖಾತೆಗಳು ಬ್ಲ್ಯೂಟಿಕ್ ಪಡೆಯಬೇಕು. ಇದಕ್ಕೆ ಆಧಾರ್ ಕಾರ್ಡ್ ಪರಿಶೀಲನೆಯೂ ನಡೆಯಬೇಕು ಎಂದು ಹೇಳಿದ್ದಾರೆ.

Join Whatsapp
Exit mobile version