Home ಟಾಪ್ ಸುದ್ದಿಗಳು ಮಾನನಷ್ಟ ದಾವೆ| ನಟಿ ಕಂಗನಾ ರಣಾವತ್ ಗೆ ಮುಂಬೈ ಕೋರ್ಟ್ ಸಮನ್ಸ್

ಮಾನನಷ್ಟ ದಾವೆ| ನಟಿ ಕಂಗನಾ ರಣಾವತ್ ಗೆ ಮುಂಬೈ ಕೋರ್ಟ್ ಸಮನ್ಸ್

ಮುಂಬೈ : ನಟಿ ಕಂಗನಾ ರಣಾವತ್ ವಿರುದ್ಧ ಮುಂಬೈ ನ್ಯಾಯಾಲಯವೊಂದು ಸಮನ್ಸ್ ಜಾರಿಗೊಳಿಸಿದೆ. ಜಾವೇದ್ ಅಖ್ತರ್ ಮಾನನಷ್ಟ ದಾವೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯ ಅಗತ್ಯವಿದೆ ಎಂದು ಪೊಲೀಸರು ಕೋರಿರುವುದರಿಂದ, ಕೋರ್ಟ್ ಈ ನಿರ್ದೇಶನ ನೀಡಿದೆ.

ವಿಷಯಕ್ಕೆ ಸಂಬಂಧಿಸಿ ಪೊಲೀಸರು ಸೋಮವಾರ ಅಂಧೇರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ರಣಾವತ್ ವಿರುದ್ಧ ಕಳೆದ ನವೆಂಬರ್ ನಲ್ಲಿ ಜಾವೇದ್ ಅಖ್ತರ್ ದಾಖಲಿಸಿರುವ ಮಾನನಷ್ಟ ದಾವೆ ಕುರಿತಂತೆ ಪರಿಶೀಲಿಸಲು ಕಳೆದ ಡಿಸೆಂಬರ್ ನಲ್ಲಿ ಕೋರ್ಟ್ ಪೊಲೀಸರಿಗೆ ನಿರ್ದೇಶಿಸಿತ್ತು.

ಮುಂದಿನ ವಿಚಾರಣೆ ಮಾ.1ಕ್ಕೆ ಮುಂದೂಡಲಾಗಿದೆ. ಪೊಲೀಸರು ರಣಾವತ್ ಗೆ ಕಳೆದ ತಿಂಗಳು ಸಮನ್ಸ್ ಜಾರಿಗೊಳಿಸಿ, ತಮ್ಮ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಆಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಜಾವೇದ್ ಅಖ್ತರ್ ರ ನ್ಯಾಯವಾದಿ ಕೋರ್ಟ್ ಗೆ ತಿಳಿಸಿದ್ದಾರೆ.   

Join Whatsapp
Exit mobile version