ಕೃಷಿ ಮಸೂದೆ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ‘ಭಯೋತ್ಪಾದಕರು’ ಎಂದ ನಟಿ ಕಂಗನಾ!

Prasthutha|

ಮೋದಿ ಸರ್ಕಾರದ ಹೊಸ ಕೃಷಿ ಮಸೂದೆಯನ್ನುವಿರೋಧಿಸಿ ಪಂಜಾಬ್, ಹರಿಯಾಣ ಸೇರಿದಂತೆ ಇತರ ಕೆಲವು ಜಿಲ್ಲೆಗಳ ರೈತರು ನಿರಂತರವಾಗಿ ಪ್ರತಿಭಟಿಸುತ್ತಿದ್ದರೆ, ನಟಿ ಕಂಗನಾ ರಾಣಾವತ್ ಪ್ರತಿಭಟನಾನಿರತ ರೈತರನ್ನು “ಭಯೋತ್ಪಾದಕರು” ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

“ಪ್ರಧಾನಮಂತ್ರಿಯವರೇ ನಿದ್ರಿಸುತ್ತಿರುವವರನ್ನು ಎಬ್ಬಿಸಬಹುದು, ಅಪಾರ್ಥಮಾಡಿಕೊಂಡವರನ್ನು  ಸರಿಪಡಿಸಬಹುದು, ಆದರೆ ಮಲಗಿದಂತೆ ನಟಿಸುವವರಿಗೆ, ಬುದ್ಧಿಹೀನರಂತೆ ವರ್ತಿಸುವವರಿಗೆ ನಿಮ್ಮ ವಿವರಣೆಗಳಿಂದ ಏನು ಪ್ರಭಾವ ಬೀರುತ್ತೇ? (ಏನು ವ್ಯತ್ಯಾಸ ಆಗುವುದಿಲ್ಲ). ಇದೇ ಭಯೋತ್ಪಾದಕರು, ಸಿಎಎಯಿಂದಾಗಿ ಒಬ್ಬನೇ ಒಬ್ಬ ಪ್ರಜೆಯ ಪೌರತ್ವ ನಷ್ಟವಾಗದೇ ಇದ್ದರೂ ರಕ್ತದ ನದಿಗಳನ್ನು ಹರಿಸಿದ್ದರು” ಎಂಬುದಾಗಿ ನಟಿ ಕಂಗನಾ ಟ್ವೀಟ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

- Advertisement -

ಇದಕ್ಕೂ ಮುನ್ನ ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಿದ ನಂತರ, ಪ್ರಧಾನಿ ಮೋದಿಯವರು ಇಂಗ್ಲಿಷ್, ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ರೈತರನ್ನು ಉದ್ದೇಶಿಸಿ ನಾಲ್ಕು ಟ್ವೀಟ್ ಮಾಡಿದ್ದರು.

ನಂತರ ನಟಿ ಕಂಗನಾ ಸಂಜೆ ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ಮೋದಿಯವರನ್ನು ಅಭಿಸಂಬೋಧಿಸಿ ಈ ವಿವಾದಾತ್ಮಕ ವಿಡಿಯೋ ಟ್ವೀಟ್ ಮಾಡಿದ್ದಾರೆ.

- Advertisement -