ಕಾಂಚನಾ-3 ನಟಿ ಅಲೆಕ್ಸಾಂಡ್ರಾ ಆತ್ಮಹತ್ಯೆ ಕಾರಣ ಬಹಿರಂಗ

Prasthutha|

ಗೋವಾ: ಕಾಲಿವುಡ್ ನಲ್ಲಿ ಸೂಪರ್ ಹಿಟ್ ಪಡೆದಿದ್ದ ಕಾಂಚನಾ-3 ಸಿನಿಮಾದ ರಷ್ಯನ್ ನಟಿ ಕಮ್ ಮಾಡೆಲ್ ಅಲೆಕ್ಸಾಂಡ್ರಾ ಅವರ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಫೋಟೋಗ್ರಾಫರ್ ಓರ್ವ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ತಿಳಿದುಬಂದಿದೆ.

- Advertisement -


ಆಗಸ್ಟ್ 20ರಂದು ಉತ್ತರ ಗೋವಾದ ಶಿವೋಲಿಯ ಅಪಾರ್ಟ್ಮೆಂಟ್ ವೊಂದರಲ್ಲಿ ಅಲೆಕ್ಸಾಂಡ್ರಾ ಜಾವಿ ಮೃತದೇಹ ದೊರೆತಿತ್ತು. ಈ ಕುರಿತು ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.


ತಮಿಳು ಸಿನಿಮಾಗೆ ಕೆಲಸ ಮಾಡುತ್ತಿದ್ದ ವೇಳೆ, ಆರೋಪಿ ಫೋಟೋಗ್ರಾಫರ್ ಕೂಡಾ ಆಕೆಯೊಂದಿಗೆ ಕೆಲಸ ಮಾಡುತ್ತಿದ್ದನು. ಈ ವೇಳೆ ಆತ ತನ್ನ ಬಳಿ ಅಲೆಕ್ಸಾಂಡ್ರಾ ಜಾವಿ ಅಶ್ಲೀಲ ಫೋಟೋಗಳಿರುವುದಾಗಿಯೂ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದಾನೆ. ಈ ಕುರಿತು ಜಾವಿ ಅವರು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.

- Advertisement -


ದೂರು ದಾಖಲಾದ ನಂತರ ಆರೋಪಿ ಫೋಟೋಗ್ರಾಫರ್ ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಇದೇ ವಿಚಾರಕ್ಕೆ ಮಾನಸಿಕ ಆಘಾತಕ್ಕೆ ಒಳಗಾದ ನಟಿ, ಗೋವಾದ ಅಪಾರ್ಟ್ಮೆಂಟ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp