Home ಟಾಪ್ ಸುದ್ದಿಗಳು ಕೋವಿಡ್ ಲಸಿಕೆ ಪೂರೈಕೆ | ಪ್ರಧಾನಿ ಮೋದಿ-ಕಮಲಾ ಹ್ಯಾರಿಸ್‌ ದೂರವಾಣಿ ಮಾತುಕತೆ

ಕೋವಿಡ್ ಲಸಿಕೆ ಪೂರೈಕೆ | ಪ್ರಧಾನಿ ಮೋದಿ-ಕಮಲಾ ಹ್ಯಾರಿಸ್‌ ದೂರವಾಣಿ ಮಾತುಕತೆ

ನವದೆಹಲಿ : ಭಾರತಕ್ಕೆ ಕೋವಿಡ್‌ ಲಸಿಕೆ ಪೂರೈಕೆ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ದೂರವಾಣಿ ಕರೆ ಮೂಲಕ ಸಂವಾದ ನಡೆಸಿದ್ದಾರೆ. ಭಾರತಕ್ಕೆ ಲಸಿಕೆ ಪೂರೈಕೆ ಮಾಡುವುದಾಗಿ ಕಮಲಾ ಹ್ಯಾರಿಸ್‌ ಭರವಸೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಜಾಗತಿಕ ಲಸಿಕೆ ಹಂಚಿಕೆ ಯೋಜನೆ ಘೋಷಿಸಿದ್ದು, ಅದರಡಿ ಭಾರತದ ನೆರವಿಗೆ ಸಿದ್ಧವಿರುವುದಾಗಿ ಕಮಲಾ ಹ್ಯಾರಿಸ್‌ ಘೋಷಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ ಆಡಳಿತವನ್ನು ಪ್ರಧಾನ ಮೋದಿ ಶ್ಲಾಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ-ಅಮೆರಿಕ ನಡುವಣ ಬಾಂಧವ್ಯ ಮತ್ತು ಎರಡನೇ ಅಲೆಯನ್ನು ಎದುರಿಸಲು ಭಾರತೀಯ ಅಮೆರಿಕನ್ನರು ನೀಡಿದ ಬೆಂಬಲಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version