Home ಟಾಪ್ ಸುದ್ದಿಗಳು ಕಮಲ್ ನಾಥ್ ಎಂದೆಂದಿಗೂ ಕಾಂಗ್ರೆಸ್ ನಲ್ಲೇ ಇರುತ್ತಾರೆ: ದಿಗ್ವಿಜಯ್ ಸಿಂಗ್

ಕಮಲ್ ನಾಥ್ ಎಂದೆಂದಿಗೂ ಕಾಂಗ್ರೆಸ್ ನಲ್ಲೇ ಇರುತ್ತಾರೆ: ದಿಗ್ವಿಜಯ್ ಸಿಂಗ್

ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಬಿಜೆಪಿಗೆ ಜಂಪ್ ಮಾಡುತ್ತಾರೆ ಎಂಬ ವದಂತಿಗಳಿಗೆ ಇದೀಗ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪ್ರತಿಕ್ರಿಯಿಸಿದ್ದಾರೆ.


ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಮಲ್ ನಾಥ್ ಅವರ ನಿಷ್ಠೆ ಕಾಂಗ್ರೆಸ್ ಜೊತೆಗಿದೆ. ಕಮಲ್ ನಾಥ್ ಅವರು ಕಾಂಗ್ರೆಸ್ ನ ಭಾಗವಾಗಿದ್ದಾರೆ. ಹೀಗಾಗಿ ಅವರು ಯಾವತ್ತೂ ಬೇರೆ ಪಕ್ಷಕ್ಕೆ ಹಾರಲಾರರು. ಅವರು ಇಂದು, ಮುಂದೆ ಹಾಗೂ ಎಂದೆಂದಿಗೂ ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ಒತ್ತಿ ಹೇಳಿದರು.

Join Whatsapp
Exit mobile version