Home ಟಾಪ್ ಸುದ್ದಿಗಳು ಮುಸ್ಲಿಮರೆಂದರೆ ಕಾಮುಕರು ಎಂದು ಮತ್ತೆ ನಾಲಿಗೆ ಹರಿಯಬಿಟ್ಟ ಕಲ್ಲಡ್ಕ ಪ್ರಭಾಕರ ಭಟ್ಟ

ಮುಸ್ಲಿಮರೆಂದರೆ ಕಾಮುಕರು ಎಂದು ಮತ್ತೆ ನಾಲಿಗೆ ಹರಿಯಬಿಟ್ಟ ಕಲ್ಲಡ್ಕ ಪ್ರಭಾಕರ ಭಟ್ಟ

ಸಾಗರ: ಸದಾ ಕೋಮುವಾದ ಮತ್ತು ವಿವಾದಾತ್ಮಕ ಹೇಳಿಕೆಗೆ ಕುಖ್ಯಾತಿ ಪಡೆದಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಮುಸ್ಲಿಂ ಸಮುದಾಯದವರಿಗೆ ಪ್ರೀತಿ, ಪ್ರೇಮದ ವಿಷಯ ಗೊತ್ತಿಲ್ಲ. ಮುಸ್ಲಿಮರು ಎಂದರೆ ಕಾಮುಕರು ಅವರು ಬೇರೆ ಧರ್ಮದವರನ್ನು ಮದುವೆಯಾಗುವುದೇ ಇಸ್ಲಾಂಗೆ ಮತಾಂತರ ಮಾಡುವುದಕ್ಕಾಗಿ’ ಎಂದು ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಶಿವಾಜಿ ಜಯಂತಿ ಆಚರಣೆ ಅಂಗವಾಗಿ ಸಾಗರದ ಗಾಂಧಿ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿರುವ ಯಾವುದೇ ಮಸೀದಿ ಅಥವಾ ಚರ್ಚ್ ಅವರಿಗೆ ಸೇರಿದ್ದಲ್ಲ. ಅದೆಲ್ಲವೂ ಈ ನೆಲದ ಸೊತ್ತು ಆಗಿದೆ. ಇಲ್ಲಿನ ಕೆಲವು ರಾಜಕೀಯ ಪಕ್ಷಗಳಿಗೆ ಈ ಸತ್ಯವನ್ನು ಹೇಳುವ ಧೈರ್ಯವಿಲ್ಲ ಎಂದು ಹೇಳಿದರು.

Join Whatsapp
Exit mobile version