Home ಟಾಪ್ ಸುದ್ದಿಗಳು ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಕಾಳಿಚರಣ್ ಬಂಧನ

ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಕಾಳಿಚರಣ್ ಬಂಧನ

ಖಜುರಾಹೊ: ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿಚರಣ್ ಮಹಾರಾಜ್ ನನ್ನು ರಾಯ್‌ಪುರ ಪೊಲೀಸರು ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಬಂಧಿಸಿದ್ದಾರೆ.

ಮಧ್ಯಪ್ರದೇಶದ ಖಜುರಾಹೊದಿಂದ ಸುಮಾರು 25 ಕಿಮೀ ದೂರದಲ್ಲಿರುವ ಭಾಗೇಶ್ವರ ಧಾಮ್ ಬಳಿ ಬಾಡಿಗೆ ವಸತಿಗೃಹದಲ್ಲಿ ಸ್ವಾಮೀಜಿ ಮಹಾರಾಜ್ ತಂಗಿದ್ದನು.

ಇಂದು ಸಂಜೆ ವೇಳೆಗೆ ಪೊಲೀಸ್ ತಂಡ ಆರೋಪಿ ಜೊತೆ ರಾಯ್‌ಪುರ ತಲುಪಲಿದೆ ಎಂದು ರಾಯ್‌ಪುರ ಎಸ್ಪಿ ಪ್ರಶಾಂತ್ ಅಗರ್ವಾಲ್ ತಿಳಿಸಿದ್ದಾರೆ.

ರಾಯ್‌ಪುರದ ರಾವಣಭಟ್ಟ ಮೈದಾನದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್‌ನ ಕೊನೆಯ ದಿನದಂದು ಭಾರಿ ಗದ್ದಲ ಉಂಟಾಗಿತ್ತು. ಧರ್ಮ ಸಂಸತ್ತಿನಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಗುರು ಕಲಿಚರಣ್‌ ಮಹಾರಾಜ್ ನಾಥೂರಾಂ ಗೋಡ್ಸೆಗೆ ನಮನ ಸಲ್ಲಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ.

ರಾಯ್‌ ಪುರ್‌ ಮಾಜಿ ಮೇಯರ್‌ ಪ್ರಮೋದ್‌ ದುಬೆ ನೀಡಿದ್ದ ದೂರು ಆಧರಿಸಿ ತಿಕ್ರಪಾರಾ ಠಾಣೆ ಪೊಲೀಸರು ಕಾಳಿ ಚರಣ್ ವಿರುದ್ಧ ಐಪಿಸಿ ಸೆಕ್ಷನ್ 505 (2) 294 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ರಾಯ್‌ ಪುರ್‌ ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಕಾಳಿಚರಣ್‌ ಮಹಾರಾಜ್‌ ಛತ್ತೀಸ್ ಗಡದಿಂದ ಪರಾರಿಯಾಗಿದ್ದ.

ಆರೋಪಿ ಕಾಳಿಚರಣ್‌ನನ್ನು ಬಂಧಿಸಲು ಪೊಲೀಸರು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಿಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿತ್ತು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version