ಲಕ್ನೊ: ಕಳೆದೊಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ನ ಉಪಾಧ್ಯಕ್ಷ ಪ್ರಮುಖ ಮುಸ್ಲಿಮ್ ವಿದ್ವಾಂಸ ಮೌಲಾನಾ ಕಲ್ಬೇ ಸಾದಿಕ್ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಕುಟುಂಬ ತಿಳಿಸಿದೆ.
ನಿಮೋನಿಯಾದಿಂದ ಬಳಲುತ್ತಿದ್ದ 82ರ ಹರೆಯದ ಕಲ್ಬೇ ಸಾದಿಕ್ ರನ್ನು ಒಂದು ತಿಂಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು.
ತನ್ನ ತಂದೆಯ ಸ್ಥಿತಿ ಗಂಭೀರವಾಗಿದೆ. ಆದರೂ ಸ್ಥಿರವಾಗಿದೆ ಎಂದು ಅವರ ಮಗ ಕಲ್ಬೇ ಸಿಬತೈನ್ ನೂರಿ ಬುಧವಾರ ತಿಳಿಸಿದ್ದಾರೆ.
“ನನ್ನ ತಂದೆ ಉಸಿರಾಡಲು ಕಷ್ಟಪಡುತ್ತಿದ್ದಾರೆ. ಅವರಿಗೆ ಕೋವಿಡ್ -19 ನೆಗಟೀವ್ ಬಂದಿದೆ. ಅವರ ರಕ್ತದೊತ್ತಡ ಮತ್ತು ಆಮ್ಲಜನಕ ಮಟ್ಟ ಕುಸಿದ ಕಾರಣ ಮಂಗಳವಾರದಂದು ಅವರನ್ನು ಐಸಿಯುಗೆ ವರ್ಗಾಯಿಸಲಾಗಿದೆ” ಎಂದು ಅವರು ಹೇಳಿದ್ದಾರೆ.