Home ಟಾಪ್ ಸುದ್ದಿಗಳು ಕಲಬುರಗಿ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ

ಕಲಬುರಗಿ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ

►ಯಲ್ಲಪ್ಪ ಮೇಯರ್, ಹೀನಾ ಬೇಗಂ ಉಪಮೇಯರ್

ಕಲಬುರಗಿ: ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಕಾಂಗ್ರೆಸ್ ನ ಯಲ್ಲಪ್ಪ ನಾಯ್ಕೋಡಿ, ಉಪ ಮೇಯರ್ ಸ್ಥಾಪಕ್ಕೆ ಕಾಂಗ್ರೆಸ್ ನ ಹೀನಾ ಬೇಗಂ ಅವಿರೋಧವಾಗಿ ಆಯ್ಕೆಯಾದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ನೆಲದಲ್ಲಿ ಕಾಂಗ್ರೆಸ್ ಮತ್ತೆ ಹಂತಹಂತವಾಗಿ ತನ್ನ ಪ್ರಾಬಲ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.


ಮೇಯರ್ ಸ್ಥಾನ ಎಸ್ ಟಿಗೆ ಮೀಸಲಾಗಿದ್ದು, ಇಡೀ ಪಾಲಿಕೆ ಸದಸ್ಯರಲ್ಲಿ ವಾರ್ಡ್ ನಂ.53ರ ಸದಸ್ಯ ಯಲ್ಲಪ್ಪ ನಾಯ್ಕೋಡಿ ಒಬ್ಬರೇ ಎಸ್ ಟಿ ಪ್ರಮಾಣ ಪತ್ರ ಹೊಂದಿದ್ದರು.

ಬಿಜೆಪಿಯ ದಿಗಂಬರ ನಾಡಗೌಡ ಸಹ ನಾಮಪತ್ರ ಸಲ್ಲಿಸಿದ್ದರೂ, ಅವರ ನಾಮಪತ್ರ ತಿರಸ್ಕೃತ ಹಿನ್ನೆಲೆಯಲ್ಲಿ ಅವಿರೋಧವಾಗಿ ಯಲ್ಲಪ್ಪ ನಾಯ್ಕೋಡಿ ಮೇಯರ್ ಆಗಿ ಆಯ್ಕೆಯಾದರು.

Join Whatsapp
Exit mobile version