Home ಟಾಪ್ ಸುದ್ದಿಗಳು ಗುಜರಾತ್ ದ್ವೇಷ ಭಾಷಣ: ಪ್ರಧಾನಿ ಸೇರಿ 92,000 ಟ್ವಿಟರ್ ಅನುಯಾಯಿಗಳನ್ನು ಹೊಂದಿರುವ ಕಾಜಲ್ ಹಿಂದೂಸ್ತಾನಿ ಬಂಧನ

ಗುಜರಾತ್ ದ್ವೇಷ ಭಾಷಣ: ಪ್ರಧಾನಿ ಸೇರಿ 92,000 ಟ್ವಿಟರ್ ಅನುಯಾಯಿಗಳನ್ನು ಹೊಂದಿರುವ ಕಾಜಲ್ ಹಿಂದೂಸ್ತಾನಿ ಬಂಧನ

ಅಹ್ಮದಾಬಾದ್: ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ಸಭೆಯಲ್ಲಿ ದ್ವೇಷ ಭಾಷಣ ಮಾಡಿದ ಸಂಘಪರಿವಾರದ ಕಾಜಲ್ ಹಿಂದೂಸ್ತಾನಿಯನ್ನು ಪೊಲೀಸರು ಬಂಧಿಸಿದ್ದಾರೆ.


ರವಿವಾರ ಮಧ್ಯಾಹ್ನ ಊನಾ ಪೋಲೀಸರೆದುರು ಶರಣಾದ ಕಾಜಲ್ ಹಿಂದೂಸ್ತಾನಿ ಅವರನ್ನು ವಿಶೇಷ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಮ ನವಮಿಯಂದು ಗುಜರಾತಿನ ಗಿರ್ ಸೋಮನಾಥದಲ್ಲಿ ವಿಶ್ವ ಹಿಂದೂ ಪರಿಷತ್ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಕಾಜಲ್ ಅವರು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು.
ಆಗಲೇ ಅವರ ಮೇಲೆ ಎಫ್’ಐಆರ್ ದಾಖಲಿಸಲಾಗಿತ್ತು. ವಾರದ ಬಳಿಕ ಕಾಜಲ್ ಬೇರೆ ದಾರಿ ಕಾಣದೆ ಶರಣಾಗಿದ್ದಾರೆ.


ಕಾಜಲ್ ಪ್ರಧಾನಿ ನರೇಂದ್ರ ಮೋದಿ ಸೇರಿ 92,000 ಟ್ವಿಟರ್ ಅನುಯಾಯಿಗಳನ್ನು ಹೊಂದಿದ್ದಾರೆ.

Join Whatsapp
Exit mobile version