ಸಾಲಬಾಧೆಗೆ ಮನನೊಂದು ರೈತ ಆತ್ಮಹತ್ಯೆ

Prasthutha|

ಚಿಕ್ಕಮಗಳೂರು: ಈರುಳ್ಳಿ ಬೆಳೆ ನಾಶ, ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.

- Advertisement -


ಸತೀಶ್ (48) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ.


ಮೃತ ರೈತ ಸತೀಶ್ ಸಹಕಾರ ಸಂಘದಲ್ಲಿ 1 ಲಕ್ಷದ 30 ಸಾವಿರ, ತಾಯಿ ಹೆಸರಲ್ಲಿ 1 ಲಕ್ಷ ಹಾಗೂ ಈರುಳ್ಳಿ ಬೆಳೆಗಾಗಿ ಕೈ ಸಾಲವನ್ನೂ ಮಾಡಿದ್ದರು ಎಂದು ಹೇಳಲಾಗಿದೆ. ಅಲ್ಲದೇ, ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಸಂಪೂರ್ಣ ಹಾಲಾಗಿತ್ತು. ಇದರಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.