Home ಕರಾವಳಿ ಮಂಗಳೂರು ಕದ್ರಿ ಮಂಜುನಾಥ ದೇವಳದ ಹುಂಡಿಯ ದುಡ್ಡನ್ನು ಬ್ಲೌಸಿನೊಳಗೆ ಹಾಕಿದ ಟ್ರಸ್ಟಿ !

ಮಂಗಳೂರು ಕದ್ರಿ ಮಂಜುನಾಥ ದೇವಳದ ಹುಂಡಿಯ ದುಡ್ಡನ್ನು ಬ್ಲೌಸಿನೊಳಗೆ ಹಾಕಿದ ಟ್ರಸ್ಟಿ !

►ವೀಡಿಯೋದಲ್ಲಿ ಬಹಿರಂಗವಾಯ್ತು ಕೈಚಳಕ !

ಮಂಗಳೂರು: ಕದ್ರಿ ಮಂಜುನಾಥ ಕ್ಷೇತ್ರದ ಹುಂಡಿಯ ದುಡ್ಡನ್ನು ಸರಕಾರದಿಂದ ನೇಮಕವಾದ ಮಹಿಳಾ ಟ್ರಸ್ಟಿಯೊಬ್ಬರು ತನ್ನ ಬ್ಲೌಸಿನೊಳಗೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಕುರಿತ ವೀಡಿಯೋ ವೈರಲ್ ಆಗಿದೆ.

ಫೆ.24ರಂದು ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿಯ ಹಣದ ಲೆಕ್ಕಾಚಾರ ನಡೆದಿತ್ತು. ಬಳಿಕ ಸಿಸಿ ಟಿವಿ ಪರಿಶೀಲಿಸಿದಾಗ ಅದರಲ್ಲಿ ಮಹಿಳಾ ಟ್ರಸ್ಟಿಯೊಬ್ಬರು 500 ರೂ. ನೋಟುಗಳನ್ನು ಬ್ಲೌಸ್ ಒಳಗೆ ತುರುಕಿಸುತ್ತಿರುವ ದೃಶ್ಯ ಕಂಡು ಬಂದಿತ್ತು.

ಈ ಕುರಿತು ವ್ಯವಸ್ಥಾಪನ ಆಡಳಿತ ಸಮಿತಿ ಸಭೆಯಲ್ಲಿ ಆರೋಪಿ ಮಹಿಳಾ ಟ್ರಸ್ಟಿ ರಾಜೀನಾಮೆ ನೀಡುವುದಾಗಿ ಒಪ್ಪಿದ್ದರು. ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತ್ಯಕ್ಷ ದರ್ಶಿಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.

ಈ ಬಗ್ಗೆ ಸಚಿವ ವಿ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಈ ಕುರಿತು ಮಾಹಿತಿ ಬಂದಿಲ್ಲ. ಟ್ರಸ್ಟಿಗಳು ತಪ್ಪು ಮಾಡಿದ್ದು ನಿಜವಾದರೆ ರಕ್ಷಿಸುವ ಪ್ರಮೇಯವೇ ಇಲ್ಲ. ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಅಲ್ಲದೆ ವೀಡಿಯೋವನ್ನು ಸುನಿಲ್ ಬಜಿಲಕೇರಿ ಎಂಬವರು ಪೋಸ್ಟ್ ಮಾಡಿದ್ದು, ಮಂಜುನಾಥ ಕಾಪಾಡು ಎಂದು ಬರೆದುಕೊಂಡಿದ್ದಾರೆ.

Join Whatsapp
Exit mobile version