Home ಕರಾವಳಿ ಕಡಬ: ಮರ ಕಡಿಯುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಕಡಬ: ಮರ ಕಡಿಯುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಕಡಬ: ಮರ ಕಡಿಯುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಅನಡ್ಕ ಎಂಬಲ್ಲಿ ನಡೆದಿದೆ. ಕುಂತೂರಿನ ಅನಡ್ಕ ನಿವಾಸಿ ಮನೋಜ್ ಮೃತರು ಎಂದು ತಿಳಿದು ಬಂದಿದೆ.


ಮನೋಜ್ ಮರದ ರೆಂಬೆ ಕಡಿಯುವಾಗ ವಿದ್ಯುತ್ ತಂತಿ ತಗುಲಿದೆ. ಮನೋಜ್ ಅವರ ಮೃತದೇಹ ಮರದಲ್ಲಿ ನೇತಾಡಿದ್ದನ್ನು ಜನರು ನೋಡಿದ್ದಾರೆ‌. ಕಡಬ ಮೆಸ್ಕಾಂ ಹಾಗೂ ಪೊಲೀಸರು ಭೇಟಿ ನೀಡಿ ಮೃತದೇಹ ಕೆಳಗಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version