ಮೀರಾ ರಾಘವೇಂದ್ರ ಮಸಿ ಬಳಿದಿರುವುದು ಈ ದೇಶದ ಸಂವಿಧಾನಕ್ಕೆ, ಜನತೆಗೆ : ಬಿ. ಗೋಪಾಲ್

Prasthutha|

ಬೆಂಗಳೂರು : ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ರವರ ಮೇಲೆ ನ್ಯಾಯವಾದಿಯ ಕೋಟು ತೊಟ್ಟಿರುವ ಮೀರಾ ರಾಘವೇಂದ್ರ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿರುವುದು ಈ ದೇಶದ ಸಂವಿಧಾನಕ್ಕೆ ಮತ್ತು ಜನತೆಗೆ ಎಂದು ಪ್ರಜಾ ವಿಮೋಚನಾ ಸಂಘಟನೆಯ ಮುಖಂಡ ಬಿ. ಗೋಪಾಲ್ ಹೇಳಿದ್ದಾರೆ.

- Advertisement -

ಅವರು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ  ವಿಚಾರವಾದಿ ಪ್ರೊ.ಕೆ. ಎಸ್. ಭಗವಾನ್ ರವರ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರಗತಿಪರರ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. 

ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರವು ಮನುವಾದಿ ಸರಕಾರವಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸಲು ಈ ಸರಕಾರ ವಿಫಲವಾಗಿದೆ. ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿದೆ. ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿರುವವರನ್ನು ದೇಶದ್ರೋಹಿಗಳಾಗಿ ಬಿಂಬಿಸುತ್ತಿರುವುದು ಆತಂಕಕಾರಿ ಬಿ.ಗೋಪಾಲ್ ತಿಳಿಸಿದರು.

- Advertisement -

ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಲಿಂಗೇಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂವಿಧಾನದ ಎಲ್ಲಾ ಹಕ್ಕುಗಳನ್ನು ಪಡೆದು ಮೀರಾ ರಾಘವೇಂದ್ರ ವಿವೇಚನೆಯಿಲ್ಲದ ವಕೀಲರಾಗಿದ್ದಾರೆ. ಮೀರಾ ಬಳಿದಿರುವ ಮಸಿಯು ಭಗವಾನ್ ರವರಿಗಲ್ಲ ಬದಲಾಗಿ ಈ ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬಳಿದಿರುವುದಾಗಿದೆ. ಈ ಕೃತ್ಯದ ಮೂಲಕ ಅವರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಸರಕಾರ ತುಟಿ ಬಿಚ್ಚದಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.

ನ್ಯಾಯವಾದಿ ಜಗದೀಶ್ ಮಹಾದೇವ್, ನೋಂದಾಯಿತ ಆರೆಸ್ಸೆಸ್ ಕಾರ್ಯಕರ್ತ ಹನುಮೇ ಗೌಡ ಮತ್ತಿತರ ನಾಯಕರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

Join Whatsapp