ಮಂಗಳೂರು: ಇಂದು ಟೌನ್ ಹಾಲ್ ನಲ್ಲಿ ‘ಕೆ.ಎಂ.ಶರೀಫ್- ಬದುಕು ಮತ್ತು ಹೋರಾಟ’ ಅನುಸ್ಮರಣಾ ಕಾರ್ಯಕ್ರಮ

Prasthutha|

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ಚಯರ್ಮ್ಯಾನ್ ಕೆ.ಎಂ.ಶರೀಫ್ ರ ಅನುಸ್ಮರಣಾ ಕಾರ್ಯಕ್ರಮ ಇಂದು (ಡಿ.28) ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

- Advertisement -

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸೀರ್ ಹಸನ್ ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಕೆ.ಎಂ.ಶರೀಫ್ – ಬದುಕು ಮತ್ತು ಹೋರಾಟ’ ಕಾರ್ಯಕ್ರಮದಲ್ಲಿ ಹಲವು ಸಂಘಟನೆಗಳ ನಾಯಕರು, ಹೋರಾಟಗಾರರು, ಬುದ್ಧಿಜೀವಿಗಳು ಮತ್ತು ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಿಂತಕ ಹಾಗೂ ವಿಚಾರವಾದಿ ಶಿವಸುಂದರ್, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಪಕ ಪಟ್ಟಾಭಿರಾಮ ಸೋಮಯಾಜಿ, ಪರಿಸರ ತಜ್ಞ ಮತ್ತು ಕಲಾಕಾರ ದಿನೇಶ್ ಹೊಳ್ಳ, ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಲೇಖಕ ಇಸ್ಮತ್ ಫಜೀರ್, ಖ್ಯಾತ ವೈದ್ಯ ಡಾ.ಹೈದರ್,  ಪ್ರಗತಿಪರ ಹೋರಾಟಗಾರ ಶಶಿಧರ್ ಹೆಮ್ಮಾಡಿ, ಕ್ರೈಸ್ತ ಧರ್ಮಗುರು ವಿಲಿಯಂ ಮಾರ್ಟಿಸ್, ಹುಸೈನ್ ದಾರಿಮಿ ರೆಂಜಲಾಡಿ, ದ.ಕ ಜಿಲ್ಲೆ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಎನ್.ಡಬ್ಲ್ಯು.ಎಫ್ ರಾಜ್ಯಾಧ್ಯಕ್ಷೆ ಝೀನತ್ ಬಂಟ್ವಾಳ, ಪ್ರಸ್ತುತ ಪಾಕ್ಷಿಕ ಉಪಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ, ಮಿಡಿತ ತ್ರೈಮಾಸಿಕದ ಸಂಪಾದಕಿ ಫಾತಿಮಾ ನಸೀಮಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

- Advertisement -

ಕಾರ್ಯಕ್ರಮವು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ.

Join Whatsapp