Home ಟಾಪ್ ಸುದ್ದಿಗಳು ಐವನ್ ಡಿಸೋಜಾ ಮನೆಗೆ ಕಲ್ಲು ಎಸೆತ: ಕೆ.ಅಶ್ರಫ್ ಖಂಡನೆ

ಐವನ್ ಡಿಸೋಜಾ ಮನೆಗೆ ಕಲ್ಲು ಎಸೆತ: ಕೆ.ಅಶ್ರಫ್ ಖಂಡನೆ

ಮಂಗಳೂರು: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮಂಗಳೂರಿನ ವೆಲೆನ್ಸೀಯ ದಲ್ಲಿರುವ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಖಂಡನೀಯ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ  ನೀಡಿರುವ ಅವರು, ಪೊಲೀಸರು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ. ಸಂಘ ಪರಿವಾರ ತನ್ನ ಕುಕೃತ್ಯವನ್ನು ಈ ರೀತಿಯಲ್ಲಿ ಪ್ರದರ್ಶಿಸಿದೆ. ಓರ್ವ ಜನಪ್ರತಿನಿಧಿ ಯನ್ನೇ ಗುರಿಯಾಗಿಸಿ ಇಂತಹ ಕೃತ್ಯ ನಡೆಸುವುದರಲ್ಲಿ ಸಂಘಿ ಕೈವಾಡವಿದ್ದು ಇಂತಹ ಕೃತ್ಯ ಪ್ರಜಾ ಪ್ರಭುತ್ವದ ಅಡಿಪಾಯಕ್ಕೆ ಅಪಾಯ. ನೇರ ಎದುರಿಸಲು ತಯಾರಿಲ್ಲದ ಕೃತ್ಯದಾರರ್ರು ಇರುಳಲ್ಲಿ ಬಂದು ಹೇಡಿತನ ಮೆರೆದಿದ್ದಾರೆ. ಪ್ರಜಾ ಸತ್ತಾತ್ಮಕ ವಿಧದ ಮೂಲಕ ಪ್ರತಿಕ್ರಿಯಿಸುವ ಮನಸ್ಸಿಲ್ಲದ ದುಷ್ಕರ್ಮಿಗಳು ಈ ರೀತಿಯ ಮಾರ್ಗ ಅನುಸರಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

Join Whatsapp
Exit mobile version