ಪಾಕಿಸ್ತಾನ ಪದ ಬಳಕೆ : ನ್ಯಾಯಧೀಶ ವೇದವ್ಯಾಸಾಚಾರ್ ತಮ್ಮ ವಾಕ್ ಅಚಾತುರ್ಯವನ್ನು ತಿದ್ದಿಕೊಳ್ಳಿ: ಕೆ.ಅಶ್ರಫ್

Prasthutha|

- Advertisement -

ಮಂಗಳೂರು: ಬೆಂಗಳೂರಿನಲ್ಲಿ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆಯ ಸಂಧರ್ಭದಲ್ಲಿ ಬೆಂಗಳೂರಿನ ಮೈಸೂರು ಮೇಲ್ಸೇತುವೆ ಗೋರಿಪಾಲ್ಯದ ಸಂಚಾರ ಅಪರಾಧದ ಬಗ್ಗೆ ಪ್ರಸ್ತಾಪಿಸಿ ಸದ್ರಿ ಪ್ರದೇಶ ಪಾಕಿಸ್ತಾನದಲ್ಲಿ ಇದೆ ಭಾರತದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಸದ್ರಿ ಹೇಳಿಕೆಯು ಬಹುಷ ಮಾನ್ಯ ನ್ಯಾಯಾಧೀಶರ ವಾಕ್ ಅಚಾತುರ್ಯದಿಂದ ಸಂಭವಿಸಿರಬಹುದು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಂದು ಸಂಚಾರಿ ಅಪರಾಧದ ಘಟನೆಯನ್ನು ಸಂಕೇತಿಸಿ ಭಾರತ ದೇಶದ ಸಾರ್ವಭೌಮತ್ವಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡುವುದು ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರ ಗೌರವಕ್ಕೆ ಲೋಪ ಸೃಷ್ಟಿಯಾಗಬಾರದು. ಭಾರತದಲ್ಲಿ ಸಂಭವಿಸುವ ಅಪರಾಧಗಳನ್ನು ಇತರ ದೇಶಕ್ಕೆ ಹೋಲಿಸುವುದಾದರೆ ಅದೆಷ್ಟೋ ದೇಶಗಳ ಹೆಸರುಗಳನ್ನು ಪ್ರತೀ ಅಪರಾಧಗಳ ತನಿಖೆಯಲ್ಲಿ ಪ್ರಸ್ತಾಪಿಸಬೇಕಾಗುತ್ತದೆ. ಭಾರತದ ನ್ಯಾಯಾಂಗ ವ್ಯವಸ್ಥೆ ಹಾಗಾಗದಿರಲಿ.
ಮಾನ್ಯ ನ್ಯಾಯಾಧೀಶರಾದ ವೇದವ್ಯಾಸಾಚಾರ್ ಶ್ರೀಶಾನಂದ ಸಾಯಿಯವರು ತಮ್ಮಿಂದ ಆದ ಪ್ರಮದವಶಾತ್ ವಾಕ್ ಅಚಾತುರ್ಯವನ್ನು ತಿದ್ಧಿ ಕೊಳ್ಳುವುದು ಅವರು ಸೇವೆ ಸಲ್ಲಿಸುತ್ತಿರುವ ನ್ಯಾಯಾಂಗ ವ್ಯವಸ್ಥೆಗೆ ನೀಡುವ ಗೌರವ ಆಗಿದೆ ಎಂದು ಹೇಳಿದ್ದಾರೆ.



Join Whatsapp
Exit mobile version