Home ಟಾಪ್ ಸುದ್ದಿಗಳು ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿ ಪುಷ್ಪಾ ವೀರೇಂದ್ರರ ರಾಜೀನಾಮೆ ಅಂಗೀಕಾರ

ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿ ಪುಷ್ಪಾ ವೀರೇಂದ್ರರ ರಾಜೀನಾಮೆ ಅಂಗೀಕಾರ

ಮುಂಬೈ: ಲೈಂಗಿಕ ಪ್ರಕರಣದ ಕುರಿತು ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಮೂರ್ತಿ ಪುಷ್ಪಾ ವೀರೇಂದ್ರ ಗಣೆಡಿವಾಲಾ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ. ಈ ಕುರಿತು ಅಧಿಸೂಚನೆಯನ್ನು ಹೊರಡಿಸಿರುವ ಕಾನೂನು ಮತ್ತು ನ್ಯಾಯ ಸಚಿವಾಲಯ, ಪುಷ್ಪಾ ವಿರೇಂದ್ರರ ಅಧಿಕೃತ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದೆ.


ಪರಸ್ಪರ ಚರ್ಮ ಸ್ಪರ್ಶವಾದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ಪೋಸ್ಕೊ ಪ್ರಕರಣದಲ್ಲಿ ವಿವಾದಾತ್ಮಕವಾಗಿ ತೀರ್ಪು ನೀಡಿದ್ದ ಪುಷ್ಪಾ ಬಾಂಬೆ ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿದ್ದರು. ಸುಪ್ರೀಂ ಕೋರ್ಟ್ ಪುಷ್ಪಾ ಅವರ ಸೇವಾ ಅವಧಿಯನ್ನು ವಿಸ್ತರಿಸಲು ಕೊಲಿಜಿಯಂ ಶಿಫಾರಸು ಮಾಡದ ಕಾರಣ, 12 ಫೆಬ್ರವರಿ 2022 ರಂದು ಪುಷ್ಪಾ ವೀರೇಂದ್ರರ ನ್ಯಾಯಾಧೀಶೆ ಅವಧಿ ಮುಕ್ತಾಯಗೊಳ್ಳಲಿತ್ತು.

Join Whatsapp
Exit mobile version