ಮಂಗಳೂರು: ಮಂಗಳೂರಿನ ಕಾರ್ ಸ್ಟ್ರೀಟ್ ದಯಾನಂದ ಪೈ ಪದವಿ ಕಾಲೇಜಿನಲ್ಲಿ ಶಿರವಸ್ತ್ರ ನೆಪವನ್ನೊಡ್ಡಿ ವಿದ್ಯಾರ್ಥಿನಿ ಹಿಬಾ ಶೇಕ್ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆಗೆ ಮುಂದಾಗಿದ್ದು, ಇದರ ಕುರಿತು ಕೇಸು ದಾಖಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೆ ಹಾಗೂ ಹಿಬಾ ಶೇಕ್ ಮೇಲೆ ನಕಲಿ ಕೇಸು ದಾಖಲಿಸಿರುವುದರ ಕುರಿತಾಗಿ ಮಂಗಳೂರು ಡಿಸಿಪಿಯವರನ್ನು ಕ್ಯಾಂಪಸ್ ಫ್ರಂಟ್ ನಿಯೋಗ ಭೇಟಿ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿತು.
ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್, ದ.ಕ ಜಿಲ್ಲಾಧ್ಯಕ್ಷ ತಾಜುದ್ದೀನ್, ಮಂಗಳೂರು ನಗರಾಧ್ಯಕ್ಷ ಸರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಜಿಲ್ಲಾ ನಾಯಕ ಶಂಸುದ್ದೀನ್ ವಿಟ್ಲ ನಿಯೋಗದಲ್ಲಿದ್ದರು.