Home ಟಾಪ್ ಸುದ್ದಿಗಳು ‘ದಿ ಕಾಶ್ಮೀರಿ ಫೈಲ್ಸ್ ಅಶ್ಲೀಲ ಚಿತ್ರವಾಗಿದೆ’| ನಾದವ್ ಲ್ಯಾಪಿಡ್ ಹೇಳಿಕೆಯನ್ನು ಸಮರ್ಥಿಸಿದ ವಿದೇಶಿ ತೀರ್ಪುಗಾರರು

‘ದಿ ಕಾಶ್ಮೀರಿ ಫೈಲ್ಸ್ ಅಶ್ಲೀಲ ಚಿತ್ರವಾಗಿದೆ’| ನಾದವ್ ಲ್ಯಾಪಿಡ್ ಹೇಳಿಕೆಯನ್ನು ಸಮರ್ಥಿಸಿದ ವಿದೇಶಿ ತೀರ್ಪುಗಾರರು

ಹೊಸದಿಲ್ಲಿ: ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರದ ಬಗ್ಗೆ ಉದ್ದೇಶಪೂರ್ವಕ ಪ್ರಚಾರ, ಅಶ್ಲೀಲ ಮತ್ತು ಆಘಾತಕಾರಿ ಬೆಳವಣಿಗೆ ಎಂದು ಹೇಳಿಕೆ ನೀಡಿದ್ದ ಐಎಫ್‌ಎಫ್‌ಐ ತೀರ್ಪುಗಾರರ ಮುಖ್ಯಸ್ಥ ನಾದವ್ ಲ್ಯಾಪಿಡ್ ಅವರನ್ನು ತೀರ್ಪುಗಾರರಾದ ಇತರ ಸದಸ್ಯರು ಕೂಡ ಬೆಂಬಲಿಸಿದ್ದಾರೆ.

ತೀರ್ಪುಗಾರರಾದ ಜಿಂಕೊ ಗೊಟೊ, ಪಾಸ್ಕಲ್ ಶಾವೆನ್ಸ್, ಹಾವಿಯರ್ ಆಂಕ್ಯುಲೊ ಬರ್ಟ್ಯುರೆನ್ ನಾದವ್ ಲ್ಯಾಪಿಡ್ ಅವರನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಿದ್ದಾರೆ. ತೀರ್ಪುಗಾರರಲ್ಲಿರುವ ಏಕೈಕ ಭಾರತೀಯ ನಿರ್ದೇಶಕ ಸುದೀಪ್ತೋ ಸೇನ್, ನಾದವ್ ಲ್ಯಾಪಿಡ್ ಹೇಳಿಕೆ ವೈಯಕ್ತಿಕ ಎಂದು ಹೇಳಿದ್ದರು.  

ಆದಾಗ್ಯೂ, ನಾದವ್ ಲ್ಯಾಪಿಡ್ ಅವರದ್ದು ವೈಯಕ್ತಿಕ ಹೇಳಿಕೆಯಲ್ಲ. ತೀರ್ಪುಗಾರರ ಅಭಿಪ್ರಾಯವನ್ನೇ ಅವರು ಹೇಳಿದ್ದಾರೆ. ತೀರ್ಪುಗಾರರ ಮುಖ್ಯಸ್ಥರಾಗಿ ಅವರು ಹೇಳಿರುವುದನ್ನು ಸಂಪೂರ್ಣವಾಗಿ ನಾವು ಕೂಡ ಒಪ್ಪುತ್ತೇವೆ ಎಂದು ತೀರ್ಪುಗಾರರಾದ ಇತರ ಸದಸ್ಯರು ಹೇಳಿಕೆ ನೀಡಿದ್ದಾರೆ.

ಮೂವರೂ ಸಹಿ ಮಾಡಿದ ಜಂಟಿ ಹೇಳಿಕೆಯನ್ನು ಅವರು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ.

Join Whatsapp
Exit mobile version