ನವದೆಹಲಿ: ಲಸಿಕೆ ನೀಡುವುದರ ಮೂಲಕ ಮಾತ್ರವೇ ಕೋವಿಡ್ ಹರಡುವುದನ್ನು ತಡೆಗಟ್ಟಬಹುದೇ ಹೊರತು, ಕೇಂದ್ರ ಸರ್ಕಾರ ಹೆಣೆಯುತ್ತಿರುವ ಕಟ್ಟುಕಥೆಗಳಿಂದಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾತ್ರವಲ್ಲ ಮೋದಿ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವೈಫಲ್ಯತೆ ಕಂಡಿದೆ. ದೇಶದಲ್ಲಿ ಇನ್ನೂ ಅನೇಕರು ಲಸಿಕೆ ಪಡೆಯಲು ಬಾಕಿವುಳಿದಿದ್ದಾರೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಲಸಿಕಾ ಅಭಿಯಾನದಲ್ಲಿ ಯಶಸ್ವಿ ಕಾಣಲು ಭಾರತೀಯ ವಿಜ್ಞಾನಿಗಳು ಮತ್ತು ಸಂಶೋಧಕರ ಸಾಧನೆಯನ್ನು ಶ್ಲಾಘಿಸಿದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪತ್ರಿಕಾ ಹೇಳಿಕೆಯನ್ನು ಹಂಚಿಕೊಂಡು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.