Home ಟಾಪ್ ಸುದ್ದಿಗಳು ನ್ಯಾಯಾಧೀಶರು ದೇವರಲ್ಲ, ನ್ಯಾಯಾಧೀಶರ ಮುಂದೆ ಯಾರೂ ಕೈಮುಗಿದು ವಾದಿಸಬೇಕಾಗಿಲ್ಲ: ಹೈಕೋರ್ಟ್

ನ್ಯಾಯಾಧೀಶರು ದೇವರಲ್ಲ, ನ್ಯಾಯಾಧೀಶರ ಮುಂದೆ ಯಾರೂ ಕೈಮುಗಿದು ವಾದಿಸಬೇಕಾಗಿಲ್ಲ: ಹೈಕೋರ್ಟ್

ತಿರುವನಂತಪುರಂ: ನ್ಯಾಯಾಧೀಶರು “ದೇವರುಗಳಲ್ಲ” ಮತ್ತು ವಾದಿಗಳು ಮತ್ತು ವಕೀಲರು ನ್ಯಾಯಾಲಯದ ಮುಂದೆ ಕೈಮುಗಿದು ಹಾಜರಾಗುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ಒಳಗೆ ಸಭ್ಯತೆಯನ್ನು ಮಾತ್ರ ಕಾಪಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಹೇಳಿದರು.

ಸಾಮಾನ್ಯವಾಗಿ ನ್ಯಾಯಾಲಯವನ್ನು ‘ನ್ಯಾಯದ ದೇವಾಲಯ’ ಎಂದು ಕರೆಯಲಾಗುತ್ತದೆ. ಆದರೆ ಬೆಂಚಿನಲ್ಲಿ ಯಾವ ದೇವರೂ ಕುಳಿತಿಲ್ಲ. ನ್ಯಾಯಾಧೀಶರು ತಮ್ಮ ಸಾಂವಿಧಾನಿಕ ಕರ್ತವ್ಯಗಳು ಮತ್ತು ಬಾಧ್ಯತೆಗಳನ್ನು ಮಾಡುತ್ತಿದ್ದಾರೆ” ಎಂದು ಕೇರಳ ಹೈಕೋರ್ಟ್ ಶುಕ್ರವಾರ ಹೇಳಿದೆ. ಅಲಪ್ಪುಳ ನಿವಾಸಿಯೊಬ್ಬರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ ಆದೇಶದಲ್ಲಿ ಹೈಕೋರ್ಟ್ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರ ಮಹಿಳೆ ಖುದ್ದಾಗಿ ತನ್ನ ಪ್ರಕರಣವನ್ನು ಆಲಿಸಲು ‘ಕೈಮುಗಿದು ಕಣ್ಣೀರು ಸುರಿಸುತ್ತಾ’ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “… ಯಾವುದೇ ಕಕ್ಷಿದಾರರು ಅಥವಾ ವಕೀಲರು ತಮ್ಮ ಪ್ರಕರಣವನ್ನು ನ್ಯಾಯಾಲಯದ ಮುಂದೆ ಕೈಮುಗಿದು ವಾದಿಸುವ ಅಗತ್ಯವಿಲ್ಲ.ಏಕೆಂದರೆ ನ್ಯಾಯಾಲಯದ ಮುಂದೆ ಪ್ರಕರಣವನ್ನು ವಾದಿಸುವುದು ಅವರ ಸಾಂವಿಧಾನಿಕ ಹಕ್ಕು ಅಂತ ತಿಳಿಸಿದರು.

Join Whatsapp
Exit mobile version