Home ಟಾಪ್ ಸುದ್ದಿಗಳು ಪತ್ರಕರ್ತ ಸಿದ್ದೀಕ್ ಕಾಪ್ಪನ್’ಗೆ ಕೊನೆಗೂ ಜಾಮೀನು

ಪತ್ರಕರ್ತ ಸಿದ್ದೀಕ್ ಕಾಪ್ಪನ್’ಗೆ ಕೊನೆಗೂ ಜಾಮೀನು

ಲಕ್ನೋ: ಜಾರಿ ನಿರ್ದೇಶನಾಲಯ-ಇಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಗೆ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಜಾಮೀನು ನೀಡಿದೆ.

ಯುಎಪಿಎ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈಗಾಗಲೇ ಜಾಮೀನು ನೀಡಿರುವುದರಿಂದ ಕಾಪ್ಪನ್ ಶೀಘ್ರವೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇ.ಡಿ.ಪ್ರಕರಣದಲ್ಲಿ ಸಿದ್ದೀಕ್ ಅವರಿಗೆ ಈಗ ಜಾಮೀನು ಲಭಿಸಿದೆ.

2020 ಅಕ್ಟೋಬರ್ 5ರಂದು ಹತ್ರಾಸ್’ಗೆ ವರದಿ ಮಾಡಲು ತೆರಳುತ್ತಿದ್ದಾಗ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಎರಡು ವರ್ಷಗಳಿಂದ ಜೈಲಿನಲ್ಲಿರುವ ಸಿದ್ದೀಕ್ ಅವರು ಈಗ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.

Join Whatsapp
Exit mobile version