ನವದೆಹಲಿ: ಕಾಶ್ಮೀರ ಮೂಲದ ಪತ್ರಕರ್ತ ಇರ್ಫಾನ್ ಮೆಹ್ರಾಜ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ.
ದೆಹಲಿಯ ಎನ್’ಐಎಯಲ್ಲಿ ದಾಖಲಾದ ಎಫ್’ಐಆರ್ ಸಂಖ್ಯೆ ಆರ್’ಸಿ -37/2020 ಗೆ ಸಂಬಂಧಿಸಿದಂತೆ ಮೆಹ್ರಾಜ್ ಅವರನ್ನು ಎನ್’ಐಎ ವಿಚಾರಣೆಗಾಗಿ ಬಂಧಿಸಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ಕೆಡಿಸಿ ವರದಿಮಾಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇರ್ಫಾನ್ ಅವರನ್ನು ಈ ಹಿಂದೆ ಪ್ರಶ್ನಿಸಲಾಗಿತ್ತು ಮತ್ತು ಸೋಮವಾರ ಸಂಜೆ ಇರ್ಫಾನ್’ರನ್ನು ಔಪಚಾರಿಕವಾಗಿ ಬಂಧಿಸಿ ನವದೆಹಲಿಗೆ ಕರೆದೊಯ್ಯಲಾಗಿದೆ.
ಕಾಶ್ಮೀರದ ಖ್ಯಾತ ಪತ್ರಕರ್ತರಾಗಿರುವ ಇರ್ಫಾನ್ ಕಾಶ್ಮೀರದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ಡಾಯ್ಚ ವೆಲ್ಲೆ, ಅಲ್ ಜಝೀರಾ ಇಂಗ್ಲಿಷ್ ಮತ್ತು ಇತರ ಅನೇಕ ಮಾಧ್ಯಮಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಇರ್ಫಾನ್ ಪ್ರಸ್ತುತ ಯುಎಸ್’ಎ ಮೂಲದ ಸುದ್ದಿ ಸಂಸ್ಥೆ ‘ಟು ಸರ್ಕಲ್.ನೆಟ್’ ಸಂಪಾದಕರಾಗಿದ್ದಾರೆ.