Home ಟಾಪ್ ಸುದ್ದಿಗಳು ಕರಸೇವಕನ ಬಂಧನ ಪ್ರಕರಣದಲ್ಲಿ ಜೋಶಿ ಕೈವಾಡವಿದೆ: ಜಗದೀಶ್ ಶೆಟ್ಟರ್

ಕರಸೇವಕನ ಬಂಧನ ಪ್ರಕರಣದಲ್ಲಿ ಜೋಶಿ ಕೈವಾಡವಿದೆ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕರ ಸೇವಕನ ಬಂಧನ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕೈವಾಡ ಇದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷದ ಹಿಂದಿನ ಪ್ರಕರಣವನ್ನು ಪರಿಷ್ಕರಣೆ ಮಾಡಿಕೊಂಡು ವಾಪಸ್ ಪಡೆಯಬೇಕಿತ್ತು. ಈಗ ಹೋರಾಟ ಮಾಡುವವರು ಕರಸೇವಕರ ಮೇಲಿನ ಕೇಸ್ ವಾಪಸ್ ಪಡೆಯೋ ಪ್ರಯತ್ನ ಯಾಕೆ ಮಾಡಲಿಲ್ಲ? 7-8 ವರ್ಷ ಬಿಜೆಪಿ (BJP) ಅಧಿಕಾರದಲ್ಲಿತ್ತು. ನಾನು ಕೇವಲ 10 ತಿಂಗಳು ಸಿಎಂ ಆಗಿದ್ದು, ಹಿಂದೆ ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

ಆರ್.ಅಶೋಕ್ ಅವರು ಹೋಮ್ ಮಿನಿಸ್ಟರ್ ಆಗಿದ್ದರು. ಆಗ ಯಾಕೆ ಕೇಸ್ ವಾಪಸ್ ಪಡೆಯಲಿಲ್ಲ? ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋಕೆ ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ. ಇದೆಲ್ಲ ಚುನಾವಣೆ ಗಿಮಿಕ್, ಇದರಲ್ಲಿ ಪ್ರಹ್ಲಾದ್ ಜೋಶಿಯವರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

Join Whatsapp
Exit mobile version