Home ಟಾಪ್ ಸುದ್ದಿಗಳು ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ಕೊಟ್ಟರೆ ಬಿಜೆಪಿ ಸೇರ್ಪಡೆ: ಅರುಣ್ ಪುತ್ತಿಲ

ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ಕೊಟ್ಟರೆ ಬಿಜೆಪಿ ಸೇರ್ಪಡೆ: ಅರುಣ್ ಪುತ್ತಿಲ

ಪುತ್ತೂರು: ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನಿಡಿದರೂ ಬಿಜೆಪಿಗೆ ಸೇರ್ಪಡೆ ಆಗುವುದಾಗಿ ಪುತ್ತಿಲ ಪರಿವಾರ ಮುಖಂಡ ಅರುಣ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದಿಂದ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿಯವರೇ ಮಾತುಕತೆಯಲ್ಲಿ ಮಂಡಲದ ಜವಾಬ್ದಾರಿ ಕೊಡ್ತೇನೆ ಎಂದು ಹೇಳಿದ್ದಾರೆ. ಅವರ ಮಾತು ಅವರು ಉಳಿಸಿಕೊಳ್ಳಲಿ, ನಾವು ನಮ್ಮ ಮಾತು ಉಳಿಸಿಕೊಳ್ತೇವೆ. ನಾನು ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿಯವರ ಜೊತೆ ಮಾತುಕತೆ ಮಾಡಿದ್ದೇನೆ. ಅಣ್ಣಾಮಲೈ, ಸಂಸದ ನಳಿನ್ ಕಟೀಲ್ ಜೊತೆಗೂ ಮಾತುಕತೆ ಆಗಿರೋದು ಸತ್ಯ. ನಮಗೆ ಬಿಜೆಪಿ ಜೊತೆ ವಿಲೀನಕ್ಕೆ ಯಾವುದೇ ವಿರೋಧ ಇಲ್ಲ. ನಮ್ಮ ಅಪೇಕ್ಷೆ ಹಾಗೂ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗಬಾರದು. ಪಕ್ಷದ ಒಳಗೆ ಬಂದ ನಂತರ ಲೋಕಸಭೆಗೆ ಯಾರನ್ನೂ ಬೇಕಾದರೂ ಆಯ್ಕೆ ಮಾಡಲಿ. ಪಕ್ಷದ ಒಳಗೆ ಬಂದ ನಂತರ ಸೂಚನೆ ಪ್ರಕಾರ ಕೆಲಸ ಮಾಡ್ತೇವೆ ಎಂದು ಪುತ್ತಿಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪುತ್ತೂರು ಮಂಡಲದ ಅಧ್ಯಕ್ಷ ಸ್ಥಾನ ಕೊಟ್ಟರೆ ಬೇಷರತ್‌ ಬಿಜೆಪಿ ಪಕ್ಷ ಸೇರಬೇಕು ಅಂತ ಮಾಜಿ ಶಾಸಕರೊಬ್ಬರು ಹೇಳಿದ್ದರು. ಮಾತೃ ಪಕ್ಷಕ್ಕೆ ಸೇರಬೇಕು ಎನ್ನುವುದು ಹಿರಿಯರ ಅಪೇಕ್ಷೆಯಾಗಿತ್ತು. ಪುತ್ತೂರಿನ ಘಟನೆ ಪಕ್ಷಕ್ಕೆ ಮುಜುಗರ ತಂದಿದೆ ಅಂತ ಹಿರಿಯರು ಹೇಳಿದ್ದರು. ಆದರೆ, ಪುತ್ತೂರಿನಲ್ಲಿ ಸ್ವಾರ್ಥ ಮತ್ತು ಸ್ವಜನಪಕ್ಷಪಾತದ ದೃಷ್ಟಿಯಿಂದ ಕೆಲವರು ವಿರೋಧ ಮಾಡಿದ್ದಾರೆ. ಹೀಗಾಗಿ ಇವತ್ತು ಕಾರ್ಯಕರ್ತರ ಅಪೇಕ್ಷೆ ಪೂರೈಸಲು ಪಕ್ಷ ನಿರ್ಧಾರ ತೆಗೆದುಕೊಳ್ಳಲಿ. ನಾನು ಯಾವುದೇ ಸಂಘದ ಮತ್ತು ಪಕ್ಷದ ಹಿರಿಯರ ಬಗ್ಗೆ ಅಗೌರವ ತೋರಿಸಿಲ್ಲ. ಇದು ಅಪಪ್ರಚಾರ ಮತ್ತು ಸೇರ್ಪಡೆಗೆ ವಿರೋಧ ಇರೋ ತಂಡದ ಕುತಂತ್ರವಾಗಿದೆ ಎಂದು ಪುತ್ತಿಲ ಹೇಳಿದ್ದಾರೆಂದು ವರದಿಯಾಗಿದೆ.

ವಿಧಾನಸಭಾ ಚುನಾವಣೆ ನಂತರ ಪುತ್ತಿಲ ಪರಿವಾರ ಸಕ್ರಿಯವಾಗಿದೆ. ಜಿಲ್ಲಾಧ್ಯಕ್ಷ ಸ್ಥಾನ ಸಿಗಬೇಕು ಎಂಬ ಒತ್ತಾಯ ಪುತ್ತಿಲ ಪರಿವಾರದಲ್ಲಿ ಇತ್ತು. ಆದರೆ, ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಬಳಿಕ ಪುತ್ತೂರು ಮಂಡಲದ ಸ್ಥಾನದ ಮಾತುಕತೆ ಆಗಿದೆ. ಆದಷ್ಟು ಬೇಗ ತೀರ್ಮಾನವನ್ನು ಪ್ರಕಟಿಸಲು ಬಿಜೆಪಿಗೆ ಒತ್ತಾಯ ಮಾಡಲಾಗಿದೆ. ಕಾರ್ಯಕರ್ತರ ಯೋಚನೆ ಮತ್ತು ಭಾವನೆಯ ಈ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Join Whatsapp
Exit mobile version