ಜುಲೈನಲ್ಲಿ ಭಾರತದಲ್ಲಿ ಜಾನ್ಸನ್‌ & ಜಾನ್ಸನ್‌ ಕೋವಿಡ್‌ ಲಸಿಕೆ ಲಭ್ಯ

Prasthutha|

ನವದೆಹಲಿ : ಜಾನ್ಸನ್‌ & ಜಾನ್ಸನ್‌ ಕಂಪೆನಿ ಅಭಿವೃದ್ಧಿ ಪಡಿಸಿರುವ ಕೋವಿಡ್‌ ಲಸಿಕೆ ಜುಲೈ ತಿಂಗಳಲ್ಲಿ ಭಾರತಕ್ಕೆ ಬರಲಿದೆ ಎಂದು ವರದಿಗಳು ತಿಳಿಸಿವೆ. ಅಮೆರಿಕ ಮೂಲದ ಲಸಿಕೆ ಉತ್ಪಾದನಾ ಕಂಪೆನಿ ಜಾನ್ಸನ್‌ & ಜಾನ್ಸನ್‌ ಕಂಪೆನಿಯಿಂದ ನೇರವಾಗಿ ಖಾಸಗಿಯಾಗಿ ಲಸಿಕೆ ಪಡೆಯಲು ಅಸೋಸಿಯೇಶನ್‌ ಆಫ್‌ ಹೆಲ್ತ್‌ ಕೇರ್‌ ಪ್ರೊವೈಡರ್ಸ್‌ (ಇಂಡಿಯಾ) ಯತ್ನಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಆರಂಭದಲ್ಲಿ ಕೆಲವೇ ಸಾವಿರಗಳಷ್ಟು ಲಸಿಕೆಗಳು ಜುಲೈ ಆರಂಭದಲ್ಲಿ ಈ ಲಸಿಕೆ ಭಾರತಕ್ಕೆ ಬರಲಿದೆ. ಒಂದೇ ಡೋಸ್‌ ಈ ಲಸಿಕೆಗೆ ಭಾರತದಲ್ಲಿ ರೂ. 1850 ಬೆಲೆ ಇರಲಿದೆ ಎಂದು ವರದಿಯಾಗಿದೆ.

ಈ ಲಸಿಕೆಯನ್ನು ಫ್ರಿಜ್‌ ಗಳಲ್ಲಿ ಸಂರಕ್ಷಿಸಿಡಬೇಕಾದ ಅಗತ್ಯವಿಲ್ಲ. ಇದು ಭಾರತದಂತಹ ದೇಶಗಳಿಗೆ ಉತ್ತಮ ಎನ್ನಲಾಗಿದೆ.

- Advertisement -

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾನ್ಸನ್‌ & ಜಾನ್ಸನ್‌ ಲಸಿಕೆ ಕೋವಿಡ್‌ ಲಘುವಿನಿಂದ ಮಧ್ಯಮ ಪ್ರಮಾಣದ ಸೋಂಕಿಗೆ ಗುರಿಯಾಗುವುದರಿಂದ ಶೇ. 66.3ರಷ್ಟು ಪರಿಣಾಮಕಾರಿಯಾಗಿದೆ. ಗಂಭೀರ ಸೋಂಕಿಗೊಳಗಾಗುವುದರಲ್ಲಿ ಶೇ.76.3ರಷ್ಟು ಪರಿಣಾಮಕಾರಿಯಾಗಿದೆ. ಲಸಿಕೆ ಪಡೆದ 28 ದಿನಗಳ ನಂತರ ಕೋವಿಡ್‌ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗ ಬೇಕಾಗುವುದರಿಂದ ಶೇ.100ರಷ್ಟು ಭದ್ರತೆ ಒದಗಿಸುತ್ತದೆ ಎಂದು ವರದಿಗಳು ತಿಳಿಸಿವೆ.   

Join Whatsapp