ತಂದೆಗೆ ವೀಡಿಯೋ ಕಾಲ್ ಮಾಡಿ, 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವ ರೂಪದರ್ಶಿ !

Prasthutha|

ಜೋಧಪುರ; ಯುವ ರೂಪದರ್ಶಿಯೊಬ್ಬಳು ತಾನು ತಂಗಿದ್ದ ಹೊಟೇಲ್’ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.
ಜೋಧಪುರ ನಗರ ನಿವಾಸಿಯಾಗಿರುವ ಫ್ಯಾಷನ್ ಮಾಡೆಲ್ ಗುನ್’ಗುನ್ ಉಪಾಧ್ಯಾಯ [19], ಹೊಟೇಲ್ ಲಾರ್ಡ್ಸ್ ಇನ್’ನಲ್ಲಿ ತಂಗಿದ್ದು, ಭಾನುವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೂ ಮೊದಲು ಗುನ್’ಗುನ್ ತನ್ನ ತಂದೆಗೆ ವೀಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು, ತನ್ನ ಮುಖವನ್ನು ಕೊನೆಯ ಬಾರಿಗೆ ನೋಡಿ‌ ಎಂದು ಹೇಳಿದ್ದಾಳೆ ಎನ್ನಲಾಗಿದೆ.
ಇದರಿಂದ ಗಾಬರಿಯಾದ ತಂದೆ, ಕೂಡಲೇ ಜೋಧಪುರ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಹೊಟೇಲ್ ತಲುಪುವಷ್ಟರಲ್ಲಿ ಆಕೆ 6ನೇ ಮಹಡಿಯಿಂದ ಜಿಗಿದಿದ್ದಳು. ಗಂಭೀರ ಗಾಯಗಳೊಂದಿಗೆ ಗುನ್’ಗುನ್ ಉಪಾಧ್ಯಾಯಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದ ಗುನ್’ಗುನ್, ಆತ್ಮಹತ್ಯೆಗೆ ಯತ್ನಿಸಲು ನಿಖರವಾದ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp