ಭಾಷಣ ಕಾರಣಕ್ಕಾಗಿ ದೇಶದ್ರೋಹದ ಆರೋಪದಡಿಯಲ್ಲಿ 535 ದಿನಗಳಿಂದ ಜೈಲಿನಲ್ಲಿರುವ ಜೆ ಎನ್ ಯು ವಿದ್ಯಾರ್ಥಿ

Prasthutha|

ನವದೆಹಲಿ: ಭಾರತದಲ್ಲಿ ರಾಜಕೀಯ ವ್ಯವಸ್ಥೆಯನ್ನು ಏಕಸ್ವಾಮ್ಯಗೊಳಿಸಲಾಗಿದ್ದು, ಈ ಏಕಸ್ವಾಮ್ಯ ಮುಸ್ಲಿಮ್ ವಿರೋಧಿ ನಿಲುವನ್ನು ಪ್ರಚಾರಪಡಿಸುತ್ತಿದೆ. ಇದಕ್ಕೆ ಉತ್ತಮ ನಿದರ್ಶನ ಶಾರ್ಜೀಲ್ ಇಮಾಮ್ ಪ್ರಕರಣ.

- Advertisement -

33 ವರ್ಷ ಪ್ರಾಯದ ಶಾರ್ಜೀಲ್ ಇಮಾಮ್ ಎಂಬ ಜೆಎನ್ ಯು ವಿದ್ಯಾರ್ಥಿ ಕೇವಲ ಒಂದು ಭಾಷಣ ಮಾಡಿದ ಕಾರಣಕ್ಕಾಗಿ ವಿಚಾರಣಾಧೀನ ಖೈದಿಯಾಗಿ ಬರೋಬ್ಬರಿ 535 ದಿನಗಳಿಂದಲೂ ಜೈಲಿನಲ್ಲಿ ಕಳೆಯುವಂತಾಗಿದೆ. ಆದರೆ ಇಮಾಮ್ ಅತ್ಯಂತ ಧೈರ್ಯದಿಂದ ಜೈಲು ದಿನಗಳನ್ನು ಎದುರಿಸುತ್ತಿದ್ದಾರೆ.

ಬಾಂಬೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ವಿಜ್ಞಾನ ಸ್ನಾತಕೋತ್ತರ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪಿಎಚ್ಡಿ ವಿದ್ಯಾರ್ಥಿಯಾಗಿರುವ ಇಮಾಮ್ ವಿರುದ್ಧ ಜನವರಿ 25, 2020 ದಿಂದ 5 ರಾಜ್ಯಗಳಲ್ಲಿ ದೇಶದ್ರೋಹ ಮತ್ತು ಭಯೋತ್ಪಾದನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಲಾಗಿದೆ.

- Advertisement -

ಪಶ್ಚಿಮ ಯುಪಿಯ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ 2020ರ ಜನವರಿ 16 ರಂದು ಶಾರ್ಜೀಲ್ ರವರು ಮಾಡಿದ ಭಾಷಣದ ವಿಡಿಯೋ ವೈರಲ್ ಆದ ನಂತರ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಅವರು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡುತ್ತಾ “ ರಸ್ತೆ ತಡೆ ನಡೆಸುವುದು ಪೌರತ್ವ ತಿದ್ದುಪಡಿ ಕಾಯ್ದೆ 2019(ಸಿ.ಎ.ಎ) ಗಿಂತ ಹೆಚ್ಚಲ್ಲ. ಅಸ್ಸಾಮ್ ಅನ್ನು ಭಾರತದಿಂದ ಬೇರ್ಪಡಿಸಬೇಕೆಂದು ಬೇರೆಯವರ ಹೇಳಿಕೆಯನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರು.
ಶಾಹಿನ್ ಬಾಗ್ ಮತ್ತು ದಕ್ಷಿಣ ದೆಹಲಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಇಮಾಮ್ ಪ್ರಮುಖ ಭಾಷಣಕಾರರಾಗಿ ಕಾಣಿಸಿಕೊಂಡಿದ್ದರು. ಅವರು ಕೂಗಿದ ಕಾಗಜ್ ನಹಿ ದಿಖಾಯೇಂಗೆ (ನಾವು ನಮ್ಮ ದಾಖಲೆಗಳನ್ನು ತೋರಿಸುವುದಿಲ್ಲ) ಎಂಬ ಘೋಷಣೆ ಭಾರೀ ಜನಪ್ರಿಯತೆ ಪಡೆದು, ದೇಶಾದ್ಯಂತ ನಡೆದ ಚಳವಳಿಯಲ್ಲಿ ಪ್ರತಿಧ್ವನಿಸಿತ್ತು.

ಜೈಲಿನಿಂದಲೇ ಆರ್ಟಿಕಲ್-14.ಕಾಮ್ ಗೆ ನೀಡಿದ ಸಂದರ್ಶನದಲ್ಲಿ ಇಮಾಮ್ ಅವರು, 2019 ರ ನಂತರ ವಿವಿಧ ಪ್ರದೇಶಗಳಲ್ಲಿ ಮುಸ್ಲಿಮರ ವಿರುದ್ಧ “ಸತತ ದಾಳಿಗಳು” ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದುಪಡಿಸಿರುವುದು, ಅಯೋಧ್ಯೆಯಲ್ಲಿ ಬಾಬರೀ ಮಸ್ಜಿದ್ ಜಾಗವನ್ನು ರಾಮ ಮಂದಿರಕ್ಕೆ ನೀಡಿರುವುದು, ಸಿಎಎ ಜಾರಿ ಮುಂತಾದವು ಅವುಗಳಲ್ಲಿ ಪ್ರಮುಖವಾದವುಗಳು. ಭಾರತದ ರಾಜಕೀಯ ಕೂಡ ಮುಸ್ಲಿಮ್ ವಿರೋಧಿ ನಿಲುವುಗಳನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ಜನವರಿ 28, 2020 ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ ಇಮಾಮ್ ಕಳೆದ 17 ತಿಂಗಳಿನಿಂದ ಅಸ್ಸಾಮಿನ ಸೆಂಟ್ರಲ್ ಜೈಲ್ ಮತ್ತು ತಿಹಾರ್ ಜೈಲಿನಲ್ಲಿ ಕಳೆಯುತ್ತಿದ್ದಾರೆ.

Join Whatsapp