ಧರ್ಮ ಸಂಸದ್ ದ್ವೇಷ ಭಾಷಣ: ಜಿತೇಂದ್ರ ತ್ಯಾಗಿಗೆ ಜಾಮೀನು

Prasthutha|

ನವದೆಹಲಿ: ಹರಿದ್ವಾರ ಧರ್ಮ ಸಂಸದ್ ನಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ಜಿತೇಂದ್ರ ತ್ಯಾಗಿ ಅಲಿಯಾಸ್ ವಾಸೀಂ ರಿಝ್ವಿ ಅವರಿಗೆ ಮೂರು ತಿಂಗಳ ಕಾಲ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

- Advertisement -

ತಾನು ದ್ವೇಷದ ಭಾಷಣದಲ್ಲಿ ತೊಡಗುವುದಿಲ್ಲ ಮತ್ತು ವಿದ್ಯುನ್ಮಾನ / ಡಿಜಿಟಲ್ / ಸಾಮಾಜಿಕ ಮಾಧ್ಯಮಗಳಿಗೆ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ ಎಂದು ಮುಚ್ಚಳಿಕೆ ನೀಡುವಂತೆ ನ್ಯಾಯಾಲಯವು ಅವರಿಗೆ ನಿರ್ದೇಶನ ನೀಡಿದೆ.

ಈ ಹಿಂದೆ ತ್ಯಾಗಿ ಅವರಿಗೆ ಉತ್ತರಖಂಡ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಆದರೆ ಮಾರ್ಚ್ 8 ರ ಆದೇಶವನ್ನು ಪ್ರಶ್ನಿಸಿ ತ್ಯಾಗಿ ಸಲ್ಲಿಸಿದ್ದ ವಿಶೇಷ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದೆ.

- Advertisement -

ಜನವರಿ 13 ರಂದು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ ವ್ಯಕ್ತಿಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಮತ್ತು 298 ರ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ತ್ಯಾಗಿಯನ್ನು ಬಂಧಿಸಲಾಗಿತ್ತು.

Join Whatsapp
Exit mobile version