Home ಟಾಪ್ ಸುದ್ದಿಗಳು ಮೋದಿ ವಿರುದ್ಧ ಟ್ವೀಟ್: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ

ಮೋದಿ ವಿರುದ್ಧ ಟ್ವೀಟ್: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ

ಅಹಮದಾಬಾದ್: ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ ಯುವ ದಲಿತ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಮ್ ಪೊಲೀಸರು ನಿನ್ನೆ ತಡರಾತ್ರಿ ಗುಜರಾತ್‌ನ ಪಾಲನ್‌ಪುರದ ಸರ್ಕ್ಯೂಟ್ ಹೌಸ್‌ನಿಂದ ಬಂಧಿಸಿದ್ದಾರೆ.

‘ಗೋಡ್ಸೆಯನ್ನು ದೇವರಾಗಿ ಕಾಣುವ’ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಕೋಮುಗಳ ನಡುವಿನ ಸಂಘರ್ಷದ ವಿರುದ್ಧ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆಗೆ ಕರೆ ನೀಡಬೇಕು ಎಂಬರ್ಥ ನೀಡುವ ಟ್ವೀಟ್‌ಗಳನ್ನು ಜಿಗ್ನೇಶ್‌ ಮಾಡಿದ್ದರು.

ಸದ್ಯ ಶಾಸಕ ಮೇವಾನಿ ವಿರುದ್ಧ ಅಸ್ಸಾಂ ನ ಕೋಕರಾಝಾರ್‌ ಜಿಲ್ಲೆಯಲ್ಲಿ ಅನುಪ್‌ ಕುಮಾರ್‌ ಡೇ ಎಂಬವರು ನೀಡಿದ್ದ ದೂರಿನನ್ವಯ ಐಪಿಸಿ ಸೆಕ್ಷನ್ 120ಬಿ, 153 (ಎ), 295 (ಎ), 506 ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧನದ ಬಳಿಕ ನಿನ್ನೆ ರಾತ್ರಿ ಅವರನ್ನು ಅಹಮದಾಬಾದ್‌ಗೆ ಕರೆದೊಯ್ಯಲಾಯಿತು ಮತ್ತು ಇಂದು ಅಸ್ಸಾಂಗೆ ಕರೆದೊಯ್ಯಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ಜಿಗ್ನೇಶ್ ಮೇವಾನಿ ಅವರು ಗುಜರಾತ್‌ನ ವಡ್ಗಾಮ್‌ನ ಶಾಸಕರಾಗಿದ್ದಾರೆ. ವಕೀಲರಾಗಿರುವ ಅವರು ಪತ್ರಕರ್ತರೂ ಕೂಡ ಆಗಿದ್ದರು.

Join Whatsapp
Exit mobile version