Home ಟಾಪ್ ಸುದ್ದಿಗಳು ರಾಹುಲ್ ಸಮ್ಮುಖದಲ್ಲಿ ಜಿಗ್ನೇಶ್, ಕನ್ನಯ್ಯಾ ಕಾಂಗ್ರೆಸ್ ಸೇರ್ಪಡೆ

ರಾಹುಲ್ ಸಮ್ಮುಖದಲ್ಲಿ ಜಿಗ್ನೇಶ್, ಕನ್ನಯ್ಯಾ ಕಾಂಗ್ರೆಸ್ ಸೇರ್ಪಡೆ

ನವದೆಹಲಿ: ನಿರೀಕ್ಷೆಯಂತೆ ಜಿಗ್ನೇಶ್ ಮೆವಾನಿ, ಕನ್ನಯ್ಯಾ ಕುಮಾರ್ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಪ್ರಸ್ತುತ ಗುಜರಾತ್ ನ ವಡಂಗಾವ್ ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೆವಾನಿ ಮತ್ತು ಸಿಪಿಐಎಂ ಯುವ ಮುಖಂಡ ಕನ್ನಯ್ಯ ಕುಮಾರ್ ಕಳೆದ ವಾರಗಳಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಮುಂಬರುವ ಗುಜರಾತ್ ವಿಧಾನ ಸಭಾ ಚುನಾವಣೆಗೆ ಪಕ್ಷ ಬಲವರ್ಧಿಸುವ ಸಲುವಾಗಿ ಇಬ್ಬರು ಯುವ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ ಎಂದು ಹೇಳಲಾಗಿದೆ.


ಅಂಬೇಡ್ಕರ್, ಗಾಂಧಿ ಮತ್ತು ಭಗತ್ ಸಿಂಗ್ ಅವರಿರುವ ಚಿತ್ರವನ್ನು ಕನ್ನಯ್ಯಾ ಅವರು ರಾಹುಲ್ ಗಾಂಧಿಗೆ ಉಡುಗೊರೆಯಾಗಿ ನೀಡಿದರು.

Join Whatsapp
Exit mobile version