Home ಟಾಪ್ ಸುದ್ದಿಗಳು ಜಾರ್ಖಂಡ್ | ನಾಲ್ವರು ಬಿಜೆಪಿ ಶಾಸಕರ ಅಮಾನತು ಹಿಂಪಡೆದ ಸ್ಪೀಕರ್

ಜಾರ್ಖಂಡ್ | ನಾಲ್ವರು ಬಿಜೆಪಿ ಶಾಸಕರ ಅಮಾನತು ಹಿಂಪಡೆದ ಸ್ಪೀಕರ್

ರಾಂಚಿ: ಜಾರ್ಖಂಡ್ ರಾಜ್ಯದ ಪ್ರಮುಖ ವಿಪಕ್ಷವಾದ ಬಿಜೆಪಿಯ ನಾಲ್ವರು ಶಾಸಕರ ಅಮಾನತನ್ನು ಸ್ಪೀಕರ್ ರವೀಂದ್ರ ನಾಥ್ ಮಹತೋ ಹಿಂಪಡೆದಿದ್ದಾರೆ. ಜೊತೆಗೆ ಬಿಜೆಪಿ ಪಕ್ಷದ ಗದ್ದಲದ ಮಧ್ಯೆ ಸದನದ ಕಲಾಪವನ್ನು ಮುಂದೂಡಿದ್ದಾರೆ.

ರಾಂಚಿಯಲ್ಲಿ ಇತ್ತೀಚೆಗೆ ಜಾನುವಾರು ಕಳ್ಳಸಾಗಾಣಿಕೆದಾರದಿಂದ ಹತ್ಯೆಗೀಡಾದ ಮಹಿಳಾ ಪೊಲೀಸ್ ಅಧಿಕಾರಿ ಸಂಧ್ಯಾ ಟೋಪ್ನೊ ಅವರಿಗೆ ನ್ಯಾಯ ಒದಗಿಸುವಂತೆ ಮತ್ತು ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಘೋಷಣೆ ಕೂಗಿದ್ದರಿಂದ ಸದನದ ಕಲಾಪವನ್ನು ಮುಂದೂಡಲಾಯಿತು.

ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು.

ಸದನದ ಕಲಾಪ ಆರಂಭವಾದ ಬಳಿಕ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಆಲಂಗೀರ್ ಆಲಂ ಅವರು ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವಂತೆ ಸ್ಪೀಕರ್’ಗೆ ಮನವಿ ಮಾಡಿದ್ದು, ಅದನ್ನು ಅಂಗೀಕರಿಸಲಾಯಿತು.

ಅಶಿಸ್ತಿನ ವರ್ತನೆಗಾಗಿ ಮಂಗಳವಾರ ಬಿಜೆಪಿ ಶಾಸಕರಾದ ಭಾನು ಪ್ರತಾಪ್ ಶಾಹಿ, ಧುಲು ಮಹ್ತೋ, ಜೈಪ್ರಕಾಶ್ ಪಟೇಲ್ ಮತ್ತು ರಣಧೀರ್ ಸಿಂಗ್ ಅವರನ್ನು ಆಗಸ್ಟ್ 4 ರವರೆಗೆ ಸ್ಪೀಕರ್ ಅಮಾನತುಗೊಳಿಸಿದ್ದರು.

Join Whatsapp
Exit mobile version