ED ವಿರುದ್ಧ FIR ದಾಖಲಿಸಿದ ಚಾರ್ಖಂಡ್ ಸಿಎಂ ಸೋರೆನ್

Prasthutha|

ರಾಂಚಿ: ಚರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ರಾಂಚಿಯ ಎಸ್ಸಿ/ಎಸ್ಟಿ ಪೊಲೀಸ್ ಠಾಣೆಯಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ಹಿರಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸೋರೆನ್ ಅವರ ದೆಹಲಿ ನಿವಾಸದಲ್ಲಿ ED ಇತ್ತೀಚೆಗೆ ನಡೆಸಿದ ಶೋಧ ಕಾರ್ಯಾಚರಣೆಗೆ ಸಂಬಂಧಿಸಿದಂತೆ FIR ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

- Advertisement -

EDಯ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಾವು ಮುಖ್ಯಮಂತ್ರಿಯಿಂದ ದೂರು ಪಡೆದುಕೊಂಡಿದ್ದೇವೆ ಎಂದು ರಾಂಚಿಯ ಹಿರಿಯ ಪೊಲೀಸ್ ಅಧೀಕ್ಷಕ ಚಂದನ್ ಕುಮಾರ್ ಸಿನ್ಹಾ ತಿಳಿಸಿರುವುದಾಗಿ ಮಾಧ್ಯಮ ವರದಿಯಾಗಿವೆ.

ಸೋಮವಾರ ಸೋರೆನ್ ಅವರ ದೆಹಲಿ ನಿವಾಸವನ್ನು ಇಡಿ ತಂಡ ಶೋಧಿಸಿತು ಮತ್ತು ಜಾರ್ಖಂಡ್ನಲ್ಲಿನ ಭೂ ವ್ಯವಹಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಂದು ಅವರನ್ನು ವಿಚಾರಣೆ ನಡೆಸುತ್ತಿದೆ. ಶೋಧದ ವೇಳೆ 36 ಲಕ್ಷ ರೂ. ಮೌಲ್ಯದ ಒಂದು ಎಸ್ಯುವಿ ಕಾರು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಇಡಿ ಹೇಳಿಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋರೆನ್ ಅವರನ್ನು ಪ್ರಸ್ತುತ ಇಡಿ ಅಧಿಕಾರಿಗಳು ರಾಂಚಿಯ ನಿವಾಸದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

Join Whatsapp
Exit mobile version