Home ಟಾಪ್ ಸುದ್ದಿಗಳು ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಸಿಎಂ ಹೇಮಂತ್ ಸೊರೇನ್

ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಸಿಎಂ ಹೇಮಂತ್ ಸೊರೇನ್

ರಾಂಚಿ: ಕಳೆದ ವಾರ ಪ್ರಮಾಣವಚನ ಸ್ವೀಕರಿಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಇಂದು (ಸೋಮವಾರ) 45 ಶಾಸಕರ ಬಹುಮತದೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ.

ಇದರ ಬೆನ್ನಲ್ಲೇ ಹೇಮಂತ್ ಸೊರೇನ್ ಸಚಿವ ಸಂಪುಟ ವಿಸ್ತರಣೆ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಪೊರೆಯಹತ್ ಶಾಸಕ ಪ್ರದೀಪ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ಮೈತ್ರಿಕೂಟವು ಪ್ರಸ್ತುತ ಜೆಎಂಎಂನಿಂದ 27, ಕಾಂಗ್ರೆಸ್ ನಿಂದ 17 ಮತ್ತು ಆರ್ ಜೆಡಿಯಿಂದ ಒಬ್ಬರು ಹೀಗೆ 45 ಶಾಸಕರನ್ನು ಹೊಂದಿದೆ. ಅದೇ ವೇಳೆ ಬಿಜೆಪಿ ಒಟ್ಟು 24 ಶಾಸಕರನ್ನು ಹೊಂದಿದೆ.

Join Whatsapp
Exit mobile version