Home ಟಾಪ್ ಸುದ್ದಿಗಳು ದೀಪಾವಳಿ ಹಬ್ಬದಂದು ತನ್ನ ಸಿಬ್ಬಂದಿಗಳಿಗೆ ಕಾರು, ಬೈಕ್ ಗಳನ್ನು ಉಡುಗೊರೆಯಾಗಿ ನೀಡಿದ ಜ್ಯುವೆಲ್ಲರಿ ಶಾಪ್ ಮಾಲೀಕ

ದೀಪಾವಳಿ ಹಬ್ಬದಂದು ತನ್ನ ಸಿಬ್ಬಂದಿಗಳಿಗೆ ಕಾರು, ಬೈಕ್ ಗಳನ್ನು ಉಡುಗೊರೆಯಾಗಿ ನೀಡಿದ ಜ್ಯುವೆಲ್ಲರಿ ಶಾಪ್ ಮಾಲೀಕ

ಚೆನ್ನೈ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತನ್ನ ಸಿಬ್ಬಂದಿಗಳಿಗೆ ಆಭರಣ ಅಂಗಡಿಯ ಮಾಲೀಕನೊಬ್ಬ ಕಾರು ಮತ್ತು ಬೈಕುಗಳನ್ನು ಉಡುಗೊರೆಯಾಗಿ ನೀಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈನ ಚಲಾನಿ ಜುವೆಲರ್ಸ್ ಎಂಬ ಚಿನ್ನದಂಗಡಿಯ ಮಾಲೀಕ ಜಯಂತಿ ಲಾಲ್ ಚಯಂತಿ ಎಂಬುವವರು ದೀಪಾವಳಿ ಬೋನಸ್ ಆಗಿ ತಮ್ಮ ನೌಕರರಿಗೆ ಕಾರು ಮತ್ತು ಬೈಕ್ ಕೊಟ್ಟು ಸರ್ಪ್ರೈಸ್ ನೀಡಿದ್ದಾರೆ

ತನ್ನನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಕ್ಕಾಗಿ ಸಿಬ್ಬಂದಿಗಳನ್ನು ಶ್ಲಾಘಿಸಿದ ಜಯಂತಿ ಲಾಲ್ , ಅವರು ಎಲ್ಲಾ ಏಳುಬೀಳುಗಳಲ್ಲಿಯೂ  ನನ್ನ ಜೊತೆಗಿದ್ದು  ಕೆಲಸ ಮಾಡಿದ್ದಾರೆ. ಹೀಗಾಗಿ, 10 ಮಂದಿಗೆ ಕಾರು ಮತ್ತು 20 ಮಂದಿ ನೌಕರರಿಗೆ ಬೈಕ್ಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ಇದು ಅವರ ಕೆಲಸವನ್ನು ಪ್ರೋತ್ಸಾಹಿಸುವುದಕ್ಕಾಗಿ ನೀಡುತ್ತಿದ್ದು, ಇದರಿಂದ ನನಗೂ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಈ ಉಡುಗೊರೆಗಾಗಿ ಅವರು ₹1.2 ಕೋಟಿ ಖರ್ಚು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version