Home ಟಾಪ್ ಸುದ್ದಿಗಳು ಯೇಸು ಕೂಡ 365 ಕೋಟಿ ದೇವತೆಗಳಲ್ಲಿ ಒಬ್ಬನಾಗುತ್ತಾನೆ: ಸೂಲಿಬೆಲೆ

ಯೇಸು ಕೂಡ 365 ಕೋಟಿ ದೇವತೆಗಳಲ್ಲಿ ಒಬ್ಬನಾಗುತ್ತಾನೆ: ಸೂಲಿಬೆಲೆ

ಮೈಸೂರು:  365 ಕೋಟಿ ಹಿಂದು ದೇವತೆಗಳಲ್ಲಿ ಕ್ರೈಸ್ತ ಕೂಡ ಒಬ್ಬನಾಗುವ ಕಾಲ ಸನ್ನಿಹಿತವಾಗಿದ್ದು, ಹಿಂದು ಮುಖವಾಡ ಧರಿಸಿದ ಕ್ರಿಪ್ಟೋ-ಕ್ರಿಶ್ಚಿಯನ್ನರು ಹೆಚ್ಚಾಗುತ್ತಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಕ್ರಿಶ್ಚಿಯನ್ನರು ಹಿಂದು ಧರ್ಮದ ಆಚರಣೆ ಅಳವಡಿಸಿಕೊಂಡು ಅಮಾಯಕರನ್ನು ಮತಾಂತರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದು ಮತದಲ್ಲಿ ನೂರಾರು ದೇವರಿದ್ದಾರೆ ಎನ್ನುತ್ತಿದ್ದರು. ಈಗ ಕ್ರಿಸ್ತನಿಗೆ ಅಷ್ಟ್ರೋತ್ತರ ನಾಮಾವಳಿ ಪಠಿಸುತ್ತಿದ್ದಾರೆ. ಚರ್ಚ್‌ ಮುಂದೆ ಗರುಡಗಂಬ ಸ್ಥಾಪಿಸಲಾಗುತ್ತಿದೆ. ಅಲ್ಲದೆ, ರಥೋತ್ಸವ, ಉರುಳುಸೇವೆ ಸೇರಿ ನಾನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೆಲ್ಲ ಗಮನಿಸಿದರೆ 365 ಕೋಟಿ ಹಿಂದು ದೇವತೆಗಳಲ್ಲಿ ಕ್ರೈಸ್ತ ಕೂಡ ಒಬ್ಬನಾಗುವ ಕಾಲ ಸನ್ನಿಹಿತವಾಗಿದೆ ಎನ್ನಿಸುತ್ತಿದೆ ಎಂದು ಹೇಳಿದ್ದಾರೆ.

Join Whatsapp
Exit mobile version