‘ಅರಬ್ಬರಿಗೆ ಮರಣ’ : ಜೆರುಸಲೇಮ್ ಧ್ವಜ ಮೆರವಣಿಗೆಯಲ್ಲಿ ಘೋಷಣೆ ಕೂಗಿದ ತೀವ್ರವಾದಿ ಇಸ್ರೇಲ್ ಬಲಪಂಥೀಯರು
Prasthutha: June 17, 2021

ಜೆರುಸಲೇಂ : ಪೂರ್ವ ಜೆರುಸಲೇಂನಲ್ಲಿ ಮಂಗಳವಾರ ನೂರಾರು ಇಸ್ರೇಲಿ ಬಲಪಂಥೀಯ ತೀವ್ರವಾದಿಗಳು ನಡೆಸಿದ್ದ ಮೆರವಣಿಗೆಯಲ್ಲಿ “ಅರಬ್ಬರಿಗೆ ಮರಣ” ಎಂಬ ಘೋಷಣೆ ಕೇಳಿಬಂದಿದೆ ಎಂದು ವರದಿಗಳು ತಿಳಿಸಿವೆ. ಗಾಝಾ ಪಟ್ಟಿಯಲ್ಲಿ ಹಮಾಸ್ ಗಳ ವಿರುದ್ಧ ಯುದ್ಧ ಮಾಡಿ, ಭೀಕರ ಹಿಂಸಾಚಾರ ನಡೆದ ಕೆಲವೇ ದಿನಗಳಲ್ಲಿ ಇಂತದ್ದೊಂದು ಘೋಷಣೆ, ಮತ್ತಷ್ಟು ಹಿಂಸೆಗೆ ಪ್ರಚೋದಿಸಲಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.
ಇದೇ ವೇಳೆ ಗಾಝಾದಲ್ಲಿ ಫೆಲೆಸ್ತೀನಿಯನ್ನರು ದಕ್ಷಿಣ ಇಸ್ರೇಲ್ ನತ್ತ ಸುಮಾರು ಹತ್ತು ಸ್ಫೋಟಕ ಬಲೂನ್ ಗಳನ್ನು ಹಾರಿಸಿದ ಘಟನೆಯೂ ನಡೆದಿದೆ.
ಪೂರ್ವ ಜೆರುಸಲೇಂನಲ್ಲಿ ಬಲಪಂಥೀಯ ತೀವ್ರವಾದಿಗಳು ನಡೆಸಿದ ಈ ಮೆರವಣಿಗೆ ಈಗ ನೂತನ ಇಸ್ರೇಲ್ ಸರಕಾರಕ್ಕೆ ಪರೀಕ್ಷೆಯೊಂದನ್ನು ತಂದೊಡ್ಡಿದೆ. ಸಂಗೀತ ವಾದ್ಯ ಪರಿಕರಗಳೊಂದಿಗೆ ನೂರಾರು ಯಹೂದಿ ಬಲಪಂಥೀಯ ತೀವ್ರವಾದಿಗಳು ಡಮಾಸ್ಕಸ್ ಗೇಟ್ ಮುಂದೆ ಮೆರವಣಿಗೆ ನಡೆಸಿದರು.
