ಮಂಗಳೂರು : ಈ ಬಾರಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆಯವರು ವಿಜಯಿಯಾಗುವುದರೊಂದಿಗೆ ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಖಾತೆ ತೆರೆಯಲಿದೆ ಎಂದು ದ.ಕ. ಜಿಲ್ಲಾ ಜೆಡಿಎಸ್ ಚುನಾವಣಾ ವೀಕ್ಷಕ ಅಡ್ವೊಕೇಟ್ ಸುಮಿತ್ ಸುವರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೀಗ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆಯವರು ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳಿಗಿಂತಳೂ ಜನರ ಸಂಪರ್ಕ ಸಾಧಿಸುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು , ಈ ಬಾರಿ ಜಯಗಳಿಸುವುದು ಖಚಿತ ಎಂದಿದ್ದಾರೆ. ಚುನಾವಣಾ ಪೂರ್ವ ತಯಾರಿಯ ಎಲ್ಲಾ ಮಜಲುಗಳನ್ನು ಇವರು ಪೂರ್ತಿರ್ಗೊಳಿಸಿದ್ದು , ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ. ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬುಯಸಿ ಮತದಾನ ಮಾಡುವ ಬಗ್ಗೆ ವಾಗ್ಧಾನ ಮಾಡಿದ್ದು ಮಾತ್ರವಲ್ಲ ಹಿಂದುಳಿದ ವರ್ಗಗಳ ಜನಾಂಗದವರ ಬೆಂಬಲದ ನಡುವೆ ಎಲ್ಲಾ ಜಾತಿ , ಧರ್ಮದ ಜನಾಂಗದವರ ಮತ ಗಳಿಸುವಲ್ಲಿ ಸುಮತಿ ಹೆಗ್ಡೆಯವರು ಯಶಸ್ವಿಯಾಗಲಿದ್ದು ಈ ಮೂಲಕ ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಖಾತೆ ತೆರೆದು ಇತಿಹಾಸ ಬರೆಯಲಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.