ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಇವತ್ತೋ, ನಾಳೇನೋ ಬಿಜೆಪಿ ಪಕ್ಷದಲ್ಲಿ ಜೆಡಿಎಸ್ ವಿಲೀನ ಆಗುತ್ತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಹೇಳಿದ್ದಾರೆ.

- Advertisement -


ವಿಕಾಸಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, JDS ವಿರುದ್ಧ ವಾಗ್ದಾಳಿ ನಡೆಸಿದರು. ಜಾತ್ಯತೀತ ಜನತಾ ದಳದವರಿಗೆ ಅಸ್ತಿತ್ವ ಇರುತ್ತೋ ಇಲ್ಲವೋ ಗೊತ್ತಿಲ್ಲ. ಬಿಜೆಪಿಯವರಿಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಪ್ಲೇಯಿಂಗ್ 11ನಲ್ಲೂ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿಯವರು ಸಬ್ಸ್ಟಿಟ್ಯೂಟ್ ಆಯ್ಕೆ ಮಾಡ್ತಿದ್ದಾರೆ. ಬಿಜೆಪಿಯವರಿಗೂ ಅಸ್ತಿತ್ವ ಇಲ್ಲ, ಜೆಡಿಎಸ್ ನವರಿಗೂ ಅಸ್ತಿತ್ವ ಇಲ್ಲ. ಒರಿಜಿನಲ್ ಭಾರತೀಯ ಜನತಾ ಪಕ್ಷ ಇಲ್ಲ, ಜೆಡಿಎಸ್ ಸಹ ಇಲ್ಲ. ಹಾಗಾಗಿ ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಹೇಳಿದರು.


ಇನ್ನು ವರ್ಗಾವರಣೆ ದಂಧೆ ಆರೋಪದ ಬಗ್ಗೆ ಮಾತನಾಡಿದ ಅವರು ಅದೇನೋ ಪೆನ್ ಡ್ರೈವ್ ಇದೆ ಅಂತಾ ಹೇಳಿದ್ದರು. ಎಸ್ ಪಿ ರೋಡ್ ನಿಂದ ಪೆನ್ ಡ್ರೈವ್ ತಂದಿರೋದು ಅನ್ನಿಸುತ್ತದೆ ಎಂದು ಹೇಳಿದ್ದಾರೆ.

Join Whatsapp