Home ಕರಾವಳಿ ಜೆಡಿಎಸ್ ನೂತನ ರಾಜ್ಯ ಕಾರ್ಯದರ್ಶಿ ಅಝೀಝ್ ಅಬ್ದುಲ್ಲಾಗೆ ಸನ್ಮಾನ

ಜೆಡಿಎಸ್ ನೂತನ ರಾಜ್ಯ ಕಾರ್ಯದರ್ಶಿ ಅಝೀಝ್ ಅಬ್ದುಲ್ಲಾಗೆ ಸನ್ಮಾನ

ಮಂಗಳೂರು: ಜೆಡಿಎಸ್ ನೂತನ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಝೀಝ್ ಅಬ್ದುಲ್ಲಾ (ಮೈಸೂರು ಬಾವ ) ಅವರನ್ನು ಜೆಡಿಎಸ್ ವತಿಯಿಂದ ಸನ್ಮಾನಿಸಲಾಯಿತು.


ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಡಾ. ಸುಮತಿ ಎಸ್. ಹೆಗ್ಡೆರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಇಝಾ ಬಜಾಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಅಝೀಝ್ ಮಲಾರ್ , ರಾಜ್ಯ ಮೀನುಗಾರಿಕಾ ಅಧ್ಯಕ್ಷರಾದ ರತ್ನಾಕರ್ ಸುವರ್ಣ, ರಾಜ್ಯ ಸಂಘಟನ ಕಾರ್ಯದರ್ಶಿ ಝಮೀರ್ ಷಾ, ಜೆಡಿಎಸ್ ಮುಖಂಡರಾದ ಅಝೀಝ್ ಪರ್ತಿಪಾಡಿ, ರಿಯಾಝ್ A1 ಕಣ್ಣೂರು , ವಿನ್ಸೆಂಟ್ ಪೀರೆರಾ, ಮಂಗಳೂರು ದಕ್ಷಿಣ ಮಹಿಳಾ ಘಟಕಾಧ್ಯಕ್ಷೆ ವೀಣಾ ಶೆಟ್ಟಿ, ಶಾಲಿನಿ ರೈ, ಶಾರದ ಶೆಟ್ಟಿ, ಪಯಾಝ್ ಬಜಾಲ್, ಅಬ್ದುಲ್ ಖಾದರ್ ಬಜಾಲ್, ಸೈಫ್ ಬಜಾಲ್, ಮನೋಜ್ ಕುಮಾರ್ ಬಜಾಲ್, ಯಾಕುಬ್ ಬಜಾಲ್, ಮುಸ್ತಫಾ ಬಜಾಲ್, ಕುಂಙಿ ಬಜಾಲ್, ಮುಹಮ್ಮದ್ ಅಲ್ತಾಫ್ ತುಂಬೆ, ಹಬೀಬ್ ರಹ್ಮಾನ್, ರಶೀದ್ ಮಂಗಳೂರು ಮತ್ತು ಹಲವಾರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭ ಜನಾಬ್ ಅಝೀಝ್ ಅಬ್ದುಲ್ಲಾಹ್ ಮಂಗಳೂರಿನ ಜೆಡಿಎಸ್ ಕಾರ್ಯಕರ್ತರೊಂದಿಗೆ ಚುನಾವಣೆ ಪ್ರಚಾರದ ಬಗ್ಗೆ ಚರ್ಚಿಸಿ ಡಾ.ಸುಮತಿ ಎಸ್ ಹೆಗ್ಡೆಯವರಿಗೆ ಶುಭ ಹಾರೈಸಿದರು. ಈ ಸಂಧರ್ಭ ರಾಜ್ಯ ಸಂಘಟನಾ ಕಾರ್ಯದರ್ಶಿ ಝಮೀರ್ ಶಾ , ಮೀನುಗಾರಿಕಾ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ , ಅಝೀಝ್ ಮಲಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಲ್ತಾಫ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ವಿನ್ಸೆಂಟ್ ಪೆರೇರಾ ಧನ್ಯವಾದಗೈದರು.

Join Whatsapp
Exit mobile version