Home ಟಾಪ್ ಸುದ್ದಿಗಳು ಜೆಡಿಎಸ್ ಸಭೆಗೆ ಪಕ್ಷದ ಮುಖಂಡ ಕಾರ್ಯಕರ್ತರ ಕಡೆಗಣನೆ: ಅಸಮಾಧಾನ

ಜೆಡಿಎಸ್ ಸಭೆಗೆ ಪಕ್ಷದ ಮುಖಂಡ ಕಾರ್ಯಕರ್ತರ ಕಡೆಗಣನೆ: ಅಸಮಾಧಾನ


ಕೊಟ್ಟಿಗೆಹಾರ: ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮದ ಅಂಗವಾಗಿ ಕೊಟ್ಟಿಗೆಹಾರದಲ್ಲಿ ನಡೆದ ಬಣಕಲ್ ಹೋಬಳಿ ಘಟಕದ ಸಭೆಗೆ ಸ್ಥಳೀಯ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರನ್ನು ಕರೆಯದೇ ಸಭೆ ನಡೆಸಿರುವುದರಿಂದ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಜೆಡಿಎಸ್ ಮುಖಂಡ ತನು ಕೊಟ್ಟಿಗೆಹಾರ ತಿಳಿಸಿದ್ದಾರೆ.


‘ಜೆಡಿಎಸ್ ಪಕ್ಷಕ್ಕೆ ಹಲವು ವರ್ಷಗಳಿಂದ ಗುರುತಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಪಕ್ಷದ ಮೇಲೆ ಅಭಿಮಾನ ಇಟ್ಟು ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಆದರೆ ಮಾರ್ಚ್ 1 ರಂದು ಮೂಡಿಗೆರೆಯಲ್ಲಿ ನಡೆಯುವ ಪಂಚರತ್ನ ಕಾರ್ಯಕ್ರಮಕ್ಕೆ ಹೋಬಳಿ ಘಟಕದಿಂದ ಕೊಟ್ಟಿಗೆಹಾರದ ನಿಸರ್ಗ ಗ್ರ್ಯಾಂಡ್ ಹೊಟೇಲ್ ನಲ್ಲಿ ಮಂಗಳವಾರ ಮುಖಂಡರು ಸಭೆ ಏರ್ಪಡಿಸಿ ಸ್ಥಳೀಯ ಮುಖಂಡ ಹಾಗೂ ಕಾರ್ಯಕರ್ತರನ್ನು ಕರೆಯದೇ ಕಡೆಗಣಿಸಿರುವುದು ಮನಸ್ಸಿಗೆ ತುಂಬಾ ಬೇಸರ ತಂದಿದೆ. ಪಕ್ಷಕ್ಕೆ ಈಚೆಗೆ ಸೇರಿದವರನ್ನು ಕರೆದು ಹಿಂದಿನಿಂದಲೂ ಪಕ್ಷಕ್ಕೆ ದುಡಿದ ಸ್ಥಳೀಯ ಮುಖಂಡ ಹಾಗೂ ಕಾರ್ಯಕರ್ತರ ಕಡೆಗಣನೆ ಪಕ್ಷದಲ್ಲಿ ಅಸಮಾಧಾನ ತರಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ

Join Whatsapp
Exit mobile version