ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸುಮತಿ ಹೆಗ್ಡೆ ಗೆಲುವು ಖಚಿತ‌ : ಜೆಡಿಎಸ್ ಯುವ ಮುಖಂಡ ಶ್ರೀನಾಥ್ ರೈ

Prasthutha|

ಮಂಗಳೂರು‌; ಈ‌ ಬಾರಿ‌ ಮಂಗಳೂರು‌ ನಗರ ದಕ್ಷಿಣ‌ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಭೂತ ಪೂರ್ವ ಜಯ‌ಗಳಿಸಲಿದ್ದಾರೆಂದು  ಯುವ ಜನತಾದಳ ನೇತಾರ ಶ್ರೀನಾಥ್ ರೈ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು‌, ಜೆಡಿಎಸ್ ಅಭ್ಯರ್ಥಿ ಮತಯಾಚನೆ ಸಂದರ್ಭ ಪ್ರಸ್ತುತ ಶಾಸಕ ವೇದವ್ಯಾಸ್ ಕಾಮತ್ ವಿರುದ್ದ ಜನರು‌ ರೋಸಿ ಹೋಗಿದ್ದು, ಈ‌ ಬಾರಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರ ಇಟ್ಟು ಬದಲಾವಣೆಗಾಗಿ ಜೆಡಿಎಸ್ ಗೆ ಮತ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅದಲ್ಲದೇ ಜೆಡಿಎಸ್ ಪಕ್ಷದ ಅಭ್ಯರ್ಥಿಯು ಅಧಿಕಾರ ಇಲ್ಲದೆಯೂ‌ ಮಾಡಿದ ಸಾಧನೆ, ಕುಮಾರಸ್ವಾಮಿಯವರ  ಜನಪರ ಪಂಚರತ್ನ ಯೋಜನೆಗಳು ಈ ಬಾರಿ ಮಂಗಳೂರಿನಲ್ಲಿಯೂ ಪಕ್ಷಕ್ಕೆ ಲಾಭ‌ ತರುವುದೆಂಬ ವಿಶ್ವಾಸ ಇದೆ. ಈ‌ ಮೂಲಕ‌ ಈ ಕ್ಷೇತ್ರದಲ್ಲಿ ಅಚ್ಚರಿದಾಯಕ ಫಲಿತಾಂಶ ಬರಲಿದೆ‌ ಎಂದರು.



Join Whatsapp